ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಗತಿಯೆನಗಿನ್ನು ದೀನನಾದೆನು ಬಹಳ ನೀನಲ್ಲದಾರು ಬಳಿಕಾ ದೇವಾಏನು ಸಾಧನವುಂಟು ಶ್ರುತ್ಯರ್ಥಗೋಚರವೆ ಧ್ಯಾನಧಾರಣೆ ದೂರವು ದೇವಾ ಪಕಾಣದೇ ನಿನ್ನಂಘ್ರಿಕಮಲವನು ಭವವೆಂಬಕಾನನಕೆ ಗುರಿಯಾದೆನು ದೇವಾಪ್ರಾಣರಕ್ಷಕರಿಲ್ಲದತಿ ಕಷ್ಟಕೊಳಗಾದಏಣ ಕುಣಕನೊಲಾದೆನು ದೇವಾಏನೆಂಬೆ ಮೂಢತ್ವವೇ ಮೌಲ್ಯವೆನಗಾಯ್ತುಜ್ಞಾನ ದೊರಕೊಂಬುದೆಂತು ದೇವಾಜ್ಞಾನವಿಲ್ಲದೆ ಬಂಧ ಪರಿಹರಿಸದೆಂದೀಗಮಾನಸದಿ ಮರಗುತಿಹೆನು ದೇವಾ 1ದುರಿತಕೋಟಿಗಳ ಜನ್ಮಂಗಳಲಿ ಮಾಡಿದರೆದೊರಕಿತದರಿಂದ ಜಡವು ದೇವಾಪರಿಪರಿಯ ಕರ್ಮಗಳು ಜನ್ಮಗಳ ಕೊಡುವದಕೆತರತರದಿ ಕರವಿಡಿದಿವೆ ದೇವಾಗುರಿಯಾದೆನೀ ಪರಿಯ ಕರ್ಮಶರಧಿಯ ತೆರೆಗೆಪರಿಹರವ ಕಾಣೆನಿದಕೆ ದೇವಾಪರಮ ಪಾವನವಾದ ದುರಿತಹರ ನಾಮಕ್ಕೆಕರಗದೋ ನನ್ನ ಕರ್ಮ ದೇವಾ 2ಲೋಕದೊಳಗಿಹ ಪಾತಕರು ತಾವು ಜೊತೆಯಾಗಿಬೇಕೆಂದು ಪಾತಕವನು ದೇವಾಜೋಕೆಯಲಿ ಛಲವಿಡಿದು ಪಾಪರಾಶಿಯ ಮಾಡೆಸಾಕೆ ನಾಮದ ಸೋಂಕಿಗೆ ದೇವಾನೂಕುವುದು ನಿಷ್ಕøತಿಗೆ ಮಲತ ಪಾಪವ ನಾಮಬೇಕೆ ನೆರವೆಂಬುದದಕೆ ದೇವಾಯಾಕೆ ನಾನೊಬ್ಬ ಮಾಡಿದ ಪಾಪರಾಶಿಯನುನೂಕದಿಹ ಬಗೆುದೇನು ದೇವಾ 3ದುರಿತವೆನಗಿಲ್ಲೆಂದು ಸ್ಥಿರಬುದ್ಧಿುಂದೊಮ್ಮೆುರುತಿಹೆನು ಧೈರ್ಯವಿಡಿದು ದೇವಾಅರಿವು ಸಿಕ್ಕದೆ ಮರವೆ ಮುಂದಾಗಿ ನಿಂದಿರಲುಮರುಗಿ ಮತ್ತೊಮ್ಮೆ ಮನದಿ ದೇವಾಅರಿವೆಂತು ಸಿಕ್ಕುವದು ದುರಿತಭರಿತನಿಗೆಂದುಸ್ಥಿರಬುದ್ಧಿ ನಿಲ್ಲದಿಹುದು ದೇವಾಉರುಳುವುದು ಮನವೆಲ್ಲಿ ಪರಿವುತಿಹೆ ನಾನಲ್ಲಿಸ್ಥಿರವೆಂದಿಗೆನಗಪ್ಪುದು ದೇವಾ 4ಏನಾದಡೇನಘವು ಬಹಳವಾಗಿಹುದಿದಕೆಹೀನಬುದ್ಧಿಯೆ ಸಾಕ್ಷಿಯು ದೇವಾನಾನಿನಿತು ದೋಯಾದಡದೇನು ದೋಗಳನೀನೈಸೆ ರಕ್ಷಿಸುವನು ದೇವಾಭಾನುವಿನ ಮುಂಭಾಗದಲಿ ತಿಮಿರ ತಾ ನಿಂದುಏನಾಗಬಲ್ಲುದೈ ದೇವಾದೀನತನವಳಿವಂತೆ ಜ್ಞಾನವನು ಬಳಿಕಿತ್ತುಆನತನ ನೀ ರಕ್ಷಿಸು ದೇವಾ 5ಕಾಲ ಬಂದರೆ ಮೋಕ್ಷ ತಾನೆ ದೊರಕುವದೆಂದುಮೇಲಾಗಿ ಶ್ರುತಿ ನುಡಿಯಲು ದೇವಾಕಾಲವೆಂಬೀ ನದಿಗೆ ಕಡೆುಲ್ಲ ಮೋಕ್ಷಕ್ಕೆಕಾಲ ತಾ ಬಹು ದೂರವು ದೇವಾಕಾಲಕರ್ಮಗಳೆಂಬ ನೇಮವನೆ ದೃಢವಿಡಿಯೆಕಾಲವೇ ಕಲ್ಪಿತವದು ದೇವಾಲೀಲೆುಂ ನಿರ್ಮಿಸಿದ ಸಂಸಾರ ಭಂಜನೆಗೆಕಾಲವದು ನಿನ್ನ ಕೃಪೆಯು ದೇವಾ 6ನನ್ನ ನಂಬಿದವರ್ಗೆ ಸಂಸಾರಗೋಷ್ಪದವುಚೆನ್ನಾಗಿ ನಂಬಿಯೆಂದು ದೇವಾನಿನ್ನ ನುಡಿುಂದ ಗೀತೆಯಲಂದು ಬೋಧಿಸಿದೆಧನ್ಯನಾದನು ಪಾರ್ಥನು ದೇವಾಉನ್ನತದ ಯೋಗಾದಿ ಸಾಧನದಿ ಪರಿಹರವೆನಿನ್ನ ಕೃಪೆಯೇ ಮುಖ್ಯವು ದೇವಾನಿನ್ನ ನಂಬಿದೆನು ತಿರುಪತಿಯ ವೆಂಕಟರಮಣಧನ್ಯ ಧನ್ಯನು ಧನ್ಯನೂ ದೇವಾ 7ಕಂ|| ಬುಧವಾರದರ್ಚನೆಯನಿದಮುದದಿಂ ಸ್ವೀಕರಿಸಿ ನನ್ನ ಮೊರೆಯಂ ಕೇಳ್ದಾಬುಧ ಸಂಗವನಿತ್ತು ನಿನ್ನಪದಸೇವಕನೆನಿಪುದೆಂದು ವೆಂಕಟರಮಣಾಓಂ ಕಾಳೀಯ ಫಣಾಮಾಣಿಕ್ಯರಂಜಿತ ಶ್ರೀಪದಾಂಬುಜಾಯ ನಮಃ
--------------
ತಿಮ್ಮಪ್ಪದಾಸರು
ಮನುಜಾವತಾರ ಶ್ರೀ ರಾಮನೆಂಬುದು ನಿಜವೆಮುನಿಮನಕೆ ನಿಲುಕದವನುಅನುಪಮನು ನಿಜಜನರನುದ್ಧರಿಸಬೇಕೆಂದುತನುವಿಡಿದು ತೋರಿಸಿದನು ತಾನು ಪದಶರಥಗೆ ಸುತನೆಂಬುದದು ವರವನಿತ್ತುದಕೆಸಸಿನೆ ಬಿಡೆ ಮುಕ್ತಿ ಪಥಕೆಎಸೆದು ವನದೊಳು ಹೊಳೆದುದದು ಮುನಿಗಳೆಲ್ಲರಿಗೆವಶವಾದನೆಂಬ ನೆವಕೆಶಶಿಮುಖಿಯನಗಲಿದುದು ನಿಜ ಭಕ್ತ ರಾವಣನಅಸುರ ಜನ್ಮದ ಭಂಗಕೆಕುಸುಮಶರ ವಶನಾದ ವಾಲಿ ವಧೆಯವನಘವನಶಿಸಿ ನಿಜವೀವದಕ್ಕೆ ನಿಲುಕೆ1ಸುಗ್ರೀವ ಮೊದಲಾದ ವಾನರರ ನೆರಹಿದುದುಸ್ವರ್ಗದವರವರಾಗಲುದುರ್ಗತಿಸ್ಥ ಕಬಂಧ ಮೊದಲಾದವರ ಶಾಪನುಗ್ಗುನುಸಿಯಾಗುತಿರಲುದುರ್ಗರೂಪದ ಮೋಕ್ಷ ಭಜಕರಿಗೆ ವಶವೆಂದುಮಾರ್ಗ ಸೇತುವ ತೋರಲುನುಗ್ಗಿ ಲಂಕಾದ್ವೀಪದೊತ್ತಿನಲಿ ನಿಂದು ಅಪವರ್ಗಧಸಿಗೆಯ ಮಾಡಲು ಕೊಡಲು 2ಕರುಣರಸವೇ ಬಾಣವೆಣಿಸೆ ಪುಷ್ಪಸಮಾನದುರಿತ ಮಾರ್ಜನ ಪಾವನಧರಣಿಯೊಳಗಿರಲೇಕೆ ಪುರವರಕೆ ಬಾಯೆಂದುಕರೆವ ಪರಿಯವರ ಗಾನಧುರದಿ ಸಾಕ್ಷಾತ್ಕಾರಿಪ ಛಲವಿಡಿದ ರಾವಣನುನೆರೆ ತನ್ನ ತಿಳಿದ ಜಾಣತಿರುಪತಿಯ ವೆಂಕಟನು ಸಕಲರಿಗೆ ಮುಕ್ತಿಯನುಕರುಣದಿಂ ಕರೆದಿತ್ತನು ತಾನು 3 ಓಂ ವತ್ಸ ವಾಟೀಚರಾಯ ನಮಃ
--------------
ತಿಮ್ಮಪ್ಪದಾಸರು
ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ. ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು 1 ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು 2 ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು 3 ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ 4 ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ- ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ- ವನವಾಯಿತು ಎಲ್ಲಾ ಕುಲಕೋಟಿಯು 5
--------------
ಹೆಳವನಕಟ್ಟೆ ಗಿರಿಯಮ್ಮ
ಸಿರಿದೇವ ನಮ್ಮ ನಿದೈವನು ಶರಣರಕ್ಷಕವಾವನು ಪ ಆಲಯದೊಳುಛಲವಿಡಿದರೆ| ಪಾಲಗಡಲದೊಳಗಿಟ್ಟೀ ಹಾ 1 ವರದ ಮದದಿ ಭಸ್ಮಾಸುರ ಬೆನ್ನಟ್ಟಿ|ಗಿರಿಜೇಶನ ಪೀಡಿಸುತಿರೇ ಭರದಿಂದೊದಗಿ ಬಂದು ಮೋಹಕ ರೂಪದಿ| ದುರುತಳನ ಭಸ್ಮವ ಮಾಡಿದಾ 2 ಅಖಳ ದೊಳಗೆ ಅರಾರಾಧಿಸುವರು| ಭಕುತಿಯಂದದಿ ತನೊಲಿವನು ಪ್ರಕಟಿದಿ ಮಹಿಪತಿ ನಂದನಮುಖದೊಳು ಸಕಲಚರಿತೆಯನು ನುಡಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನನಗೆ ಮನಕೆ ಬಡಿದಾಟೆಳೆದಾಟ ಶ್ರೀಸನಕಾದಿವಂದ್ಯ ಬಿಡಿಸಿ ಕಾಯೊದಾತಪ.ಸಲಿಲಸ್ನಾನವ ಮಾಡಿ ಊಧ್ರ್ವ ತಿಲಕವನಿಟ್ಟುನಳಿನಾಕ್ಷ ನಿನ್ನಂಘ್ರಿ ಜಪಿಸೆಂದರೆಛಲದಿಂದ ವಿಹಿತವಲ್ಲದ ದಾರಿಗೊಯ್ದೆನ್ನತೊಳಲಿಸಿ ನೆಲೆಗಾಣಿಸದೆ ಛಲವಿಡಿದಿದೆ 1ಬೇಡಿಕೊಂಡರೆ ಕೇಳದಾಡಿಕೊಂಡರೆ ಕೇಳದೀಡಾಡಿ `ಬಿಸುಟೆನ್ನ ದಣಿಸುತಿದೆನೋಡುನಾನಾಕ್ರೋಶ ಮಾಡಿದರಂಜದುಬಾಡಿ ಬಳಲಿದೆನೆನ್ನ ಕರುಣಿಲ್ಲವಿದಕೆ 2ಮನಪಶುಕಟ್ಟಲು ಜ್ಞಾನಧಂಗಡವಿಲ್ಲಘನವೈರಾಗ್ಯದ ಕಟ್ಟು ದೃಢವಿಲ್ಲವುಮಿನುಗುವ ಭಕುತ್ಯೆಂಬ ಎಳೆಹುಲ್ಲಿನಾಸಿಲ್ಲನೀನೆ ವಶಮಾಡಿಕೊ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು