ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಲವ ನೀಡೆನಗೆ ಇಹ್ಯದ ಗೆಲವ ನೀಡೆನಗೆ ಪ ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ ಕಡುಜವ್ವನದಲಿ ದುಡುಕನುಕೊಡದಿರು ಪಿಡಿದು ನೇಮವನು ಬಿಡದ ಛಲವನಿತ್ತು 1 ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ ಹರಣಪೋದರು ಪರರಿಗೆ ದೇಹಿಯೆನಿಸದಿರೋ ಪರಮಹರುಷದಿಂದ ಹರಿಶರಣರು ಮೆಚ್ಚಿ ಶಿರವದೂಗುವಂಥ ನಿರುತವರ್ತನೆಯಿತ್ತು 2 ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ ಪತಿತಪಾವನವೆನಿಪ ಭಜನಾನಂದವ ಪಾಲಿಸೊ ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು 3
--------------
ರಾಮದಾಸರು