ಮಾರ ಪ.
ಮಧುರೆಗೆ ಪೋಗಿ ನಮ್ಮ ಮರೆದ ಅಲ್ಲಿಇದಿರಾದ ಖಳರನು ಜರಿದಕದನಕರ್ಕಶನೆಂಬ ಬಿರುದ ತೋರಿ ತನ್ನಪದಕೆರಗಿದವರ ಪೊರೆದ 1
ಕಂದರ್ಪಕೋಟಿಯ ಗೆಲುವ ಇವಸೌಂದರ್ಯದಿಂದತಿ ಚೆಲುವನಂದನ ಕಂದ ಭಕ್ತರಿಗೊಲಿವ ಇವನಂದನ ಮುನಿವೃಂದಕೆ ಸಲುವ 2
ಕೊಡುವನು ಬೇಡಿದ ಫಲವ ಇವಬಿಡ ಸಖಿ ಖಳರೊಳು ಛಲವಒಡಂಬಡಿಸಿ ರಿಪುವ ಗೆಲುವನೆಂದುಮೃಡ ಬಲ್ಲನಿವನ ಕೌಶಲವ3
ಇಂಥ ಭವದ ದುರಂತ ಬಲುಸಂತಾಪವನುಂಬ ಭ್ರಾಂತಅಂಥಾ ಹರಿಯೊಳೆನ ಪಂಥಸಲ್ಲಸಂತತ ನಿನಗೆ ನಿಶ್ಚಿಂತ 4
ಇನ್ನಾದರೆ ಸುಪ್ರಸನ್ನ ನಮ್ಮಚೆನ್ನಿಗ ಹಯವದನನ್ನವರ್ಣಿಸಿ ವರ್ಣಿಸಿ ನಿನ್ನವನ ತಾರೆಹೆಣ್ಣೆತೋರೆ ಬೇಗದಿ ಅವನ 5