ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯವೆನ್ನಿ ಜನರೆಲ್ಲ ಸ್ವಾಮಿ ಭವರೋಗವ್ಶೆದ್ಯಗೆ ಭಾವಜನಯ್ಯಗೆ ಕುವಲಯಧರಸ್ವಾಮಿಗೆ ನಾರಾಯಣ ಪ. ಆಗಮಚೋರನ ಗೆಲಿದ ರಾಮ ಬೇಗನೆ ಸುರರಿಗೆ ಸುಧೆಯೆರೆದ ಕೃಷ್ಣ ನಾಗಲೋಕವ ಹೊಕ್ಕವನ ಕೊಂದಾಗ ಶಿಶು ಕೂಗೆ ಕಂಬದಿ ಬಂದಗೆ ನಾರಾಯಣ 1 ಭಾಗೀರಥಿಯ ಪಡೆದೆ ರಂಗ ಬಾಗಿಸಿ ತಾಯ ಶಿರವ ಕಡಿದೆ ರಾಮ ನೀಗಿದಶ್ವವಾಹಕಗೆ ನಾರಾಯಣ 2 ಜಲದೊಳಗಾಳ್ದನ ಸೀಳ್ದ ರಾಮ ಅಲಸದೆ ಗಿರಿಯ ಬೆನ್ನಲಿ ತಾಳ್ದ ಕೃಷ್ಣ ನೆಲನ ಕದ್ದೊಯ್ದಸುರನ ಮರ್ದಿಸಿದ ಶಿಶು- ಗೊಲಿದು ಬಲಿಯ ತುಳಿದೆ ನಾರಾಯಣ 3 ಛಲಪದದಿ ರಾಯರ ಕಡಿದೆ ರಾಮ ಬಲು ಬಿಲ್ಲನು ಕರದಲ್ಲಿ ಪಿಡಿದೆ ಕೃಷ್ಣ ಕೋ- ಡುಳ್ಳವ ಕೋಪದ ಮುಖ ದೈನ್ಯದಿ ಬೇಡುವೆ ಕೊಡಲಿಗಾರ ನಾರಾಯಣ 4 ರೂಢಿಯೊಳು ರಾಯರ ಗೆಲಿದ ರಾಮ ಓಡಿ ಹೊಕ್ಕನೆ ದುರ್ಗದ ಜಲ ಕೃಷ್ಣ ನೋಡೆ ನಾರಿಯರ ವ್ರತವಳಿದೆ ಹಯವದನ ರೂಢರಾವುತನಾದ ನಾರಾಯಣ5
--------------
ವಾದಿರಾಜ