ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು