ಪಾದಸೇವೆಯ ಪಾಲಿಸೋ ಪಂಕಜನಾಭ ಪ
ಭೂಧರ ವಿಹರಣ ಶ್ರೀಧರ ಹರಿ ನಿನ್ನಪಾದ ಅ.ಪ.
ತನು ಶೋಷಿಸಿ ತಪನವಿಶೇಷವಾಚರಿಸೆ
ಶೇಷಪರ್ವತಶಿರೋ
ಭೂಷಣವೆನಿಸಿದ ಪಾದಸೇವೆಯ 1
ಬಲು ಬಳಲಿಸಿ ರಾಜ್ಯವ ಛಲದಿಂದಾ ಕ್ರಮಿಸೆ
ಪಾದ 2
ಕುಲಸತಿಗೊಲಿದು ನಿರ್ಮಲತಪೋವನಕೆ
ಸುಳಿದು ಆ ಲಲನೆಯ ಕಲುಷವಖಂಡಿಸಿ ಲಲನಾರೂಪವನಿತ್ತು
ಸಲಹಿದ ಪಾವನ ||ಪಾದಸೇವೆಯ|| 3
ಗರಳ ನರನುತ್ತಮಾಂಗಕ್ಕೆ ಗುರಿಯಾಗಿ ಬರಲು
ಚರಣ ದುಂಗುಟದಿಂದ ಧರಣೀತಳವನೂರಿ
ನರನ ಶಿರವಕಾಯ್ದ ನರನಾರಾಯಣ ನಿನ್ನ ||ಪಾದ|| 4
ಪಿಡಿದು ಬಾಧೆಗೊಳಿಸೆ ವೇಗದಲಿ
ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ
ಮಾಂಡವ್ಯಗೆ ಒಲಿದ ವರದ ವಿಠಲ ||ನಾರಾಯಣ||5