ದೈತ್ಯರಲ್ಲೆ ದುರ್ಜನ ಸೇವೆ ಪ
ಪರರ ಲಾಭವನು ಧರಿಯೊಳು ನೋಡುತ |
ಧರಿಸಲಾರ ಧಿಕ್ಕರಿಸುತ ನುಡಿವನು |
ಪರರ ಹಾನಿಯಲಿ ಮರುಗದೆ ಮನದೊಳು |
ಹರುಷ ಬಡವುತ ಚರಿಸು-ನೈಯ್ಯಾ 1
ಖಳ್ಳೆದೆಯೊಳು ಮನದಲ್ಲಿ ಕಪಟವು |
ಸೊಲ್ಲಿತೆ ನೋಡಲು ಬೆಲ್ಲನೆ ಬೀರುವಾ |
ಒಳ್ಳಿತು ಗುಣಗಳ ಯಳ್ಳಿಲಿ ನಿತೈಣಿಸದೆ |
ಕ್ಷುಲ್ಲತನದಿ ಕುಂದಲ್ಲಿಡುವ-ಕೈಯ್ಯಾ 2
ಸತಿ |
ಎನ್ನ ಮಗÀನೆ ಮಗ ಯನ್ನ ಗುಣವೇಗುಣ |
ತನ್ನನೆ ಹೊಗಳುತ ಅನ್ಯಕ್ಹಳಿವರೆ 3
ಆವದು ಅರಿಯದ ಭಾವಿಕ ಜನರನು |
ತಾವೀಗ ಕಂಡರೆ ಆವನನುಗ್ರಹ |
ಆವ ಮಂತ್ರ ನಿನಗಾವ ನ್ಯಾಸವೇ |
ದಾವಾಗ ಛಲಣಿಯ ಭಾವಿಪರವರೇ 4
ತಂದೆ ಮಹಿಪತಿ ನಂದನ ಪ್ರಭುವಿನಾ |
ಒಂದರಗಳಿಗೆಯ ಛಂದದಿ ಸ್ಮರಿಸದೆ |
ನಿಂದೆಯ ಮನೆಯೊಳು ಸಂದಿಸಿ ಅನುದಿನಾ |
ಮಂದ ಮತಿಯರೇ 5