ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳೆ ನಂದನ ಕಾಂತೆ ಹೇಳೆ ಮಗಗೆ ಬುದ್ದಿ ಬಾಲೆಯರನು ಇರಗೊಡನೆ ದಮ್ಮಯ್ಯ ಪ ಕುತ್ತಿಗೆಯೊಳಗಣ ಮುತ್ತಿನ ಸರಗಳ ಕಿತ್ತು ಹರಿದು ಚೆಲ್ಲಿ ಪೋದ ದಮ್ಮಯ್ಯ 1 ಕಟ್ಟಿದ ಕರುಗಳ ಬಿಟ್ಟು ಒಲೆಯ ಮೇಲೆ ಇಟ್ಟ ಪಾಲ್ಗಳನೆಲ್ಲ ಕುಡಿದ ಗೋಪಮ್ಮ 2 ಪಿಕ್ಕದೊಳಿಹ ಬೆಣ್ಣೆ ಚೊಕ್ಕನೆಲ್ಲವ ಮೆದ್ದು ಮರ್ಕಟಗಳಿಗಷ್ಟನಿತ್ತ ದಮ್ಮಯ್ಯ 3 ಬೇಡವೆಂದರೆ ಛಲಗೇಡಿ ಹಿಡಿದು ಎನ್ನ ನೋಡಿ ಮೋಸವ ಮಾಡಿ ಹೋದ ದಮ್ಮಯ್ಯ 4 ಮರುತಾತ್ಮಜ ಕೋಣೆ ಲಕ್ಷ್ಮೀರಮಣಗೊಮ್ಮೆ ನಾರಿ ನೀ ಬುದ್ದಿಯ ಹೇಳೆ ದಮ್ಮಯ್ಯ 5
--------------
ಕವಿ ಪರಮದೇವದಾಸರು