ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಹರಿ ಪಾಲಿಪುದೈ ದಾಸನಾಗಿ ಸೇವೆಗೈವುದ ಪ ನೀನು ಕೂಡುವ ಪೀಠವಾಗಿ ಮಲಗಲು ಹಾಸಿಗೆಯಾಗಿ ನಾನು ಎದುರ ಕನ್ನಡಿಯಾಗುತ ಮಂಗಳದೀಪ ಪಿಡಿವೆನೈ 1 ನಿನ್ನ ಮೇಲಿನ ಛತ್ರಿಯಾಗಿ ಚಾಮರಹಿಡಿದು ಬೀಸುವೆನೈ ಚನ್ನವೈಜಯಂತಿಮಾಲೆ ಧನ್ಯ ಮುದ್ರಿಕೆಯನ್ನು ಮಾಡಿಕೊ 2 ಭೋಜನಪಾತ್ರ ತಾಂಬೂಲಭರಣಿ ರಾಜಿಪ ಫಲತಟ್ಟೆಯು ಆಗಿ ವಿಜಯಧ್ವಜವನಾಗಿಸೈ 3 ಬರೆದು ಓದುವ ಪತ್ರವಾಗಿ ಕೈಯ ಲೀಲಾಶುಕವಾಗೀ ಕೊರಳ ಕೌಸ್ತುಭಮಣಿಯಮಾಡಿ ಶಂಖಚಕ್ರಗಳನು ಹೊರಿಸು 4 ಜಾಜಿಕೇಶವ ದಿವ್ಯಸನ್ನಿಧಿ ಸಾಹ್ಯವಸ್ತುಗಳಾಗಿಸೈ ರಾಜಾಧಿರಾಜಪೂಜ್ಯ ಮಾಜದೆ ನಾಂ ಮಣಿವೆ ಬೇಡಿ5
--------------
ಶಾಮಶರ್ಮರು