ಮಂಗಲಂ ಮಂಗಲಂ ಭವತು ತೇ
ಮಂಗಲಂ ಮಂಗಲಂ ಪ.
ಅಂಗಜ ರೂಪಗೆ ಅಖಿಲ ಲೋಕೇಶಗೆ
ಶೃಂಗಾರಮೂರ್ತಿಗೆ ಶ್ರೀಕಾಂತಗೆ
ಸಂಗೀತ ಲೋಲಗೆ ಸಾಮಜವರದಗೆ
ಬಂಗಾರಗಿರಿವಾಸ ಭವಭವ ಹರಗೆ 1
ಕೃತ್ರಿಮ ರಕ್ಕಸ ಮೊತ್ತ ಸಂಹರಗೆ
ಭಕ್ತರ ಹೃದಯದಿ ಬೆಳಗುವಗೆ
ಸತ್ಯಾತ್ಮಕನಿಗೆ ಸತ್ಯನೇತ್ರನಿಗೆ
ಚಿತ್ತಜಪಿತ ಚಿನುಮಯ ಮೂರ್ತಿಗೆ 2
ಉತ್ತಮ ಗೌಡಸಾರಸ್ವತ ವಿಪ್ರರಿಂ
ನಿತ್ಯ ಪೂಜೆಯಗೊಂಬ ನೀಲಾಂಗಗೆ
ಛತ್ರಾಖ್ಯಪಟ್ಟಣ ಮಸ್ತಕ ಮಕುಟಗೆ
ಕರ್ತ ಲಕ್ಷ್ಮೀನಾರಾಯಣ ಗುಣಾಂಬುಧಿಗೆ 3