(ಶೇಷದೇವರ ಪ್ರಾರ್ಥನೆ)
ಸುಕೃತ ಭಾಗ್ಯವಂತನೋ ಗುರುಶೇಷ
ಯಂತು ಬಣ್ಣಿಸುವುದಿನ್ನು
ಮಾಂತರಂಗದಿ ಪ್ರೇಮ ಪಾತ್ರನಾಗಿರುವದೀ ಪ.
ಶ್ರೀನಿವಾಸಗೆ ಮೂರು ಸ್ಥಾನದಿ ಸರಿಯಾಗಿ
ತಾನೆ ಶಯನ ಪೀಠ ಛತ್ರನಾಗಿ
ಜ್ಞಾನಾನಂದನ ಪರಮಾನುರಾಗದಿ ನೋಡಿ
ಮಾನವ ಪಡೆದು 1
ರಾಮರೂಪದಿ ನಿಂದ ಸ್ವಾಮಿಗೆ ನಿರವಧಿ
ಪ್ರೇಮದನುಜನಾಗಿ ಪರಿಚಿರಿಸಿ
ಸೋಮವಂಶದಿ ಬಲರಾಮನೆನಿಸಿ ಸತ್ಯ-
ಭಾಮಾವರನ ಜೇಷ್ಠ ನಾಮವ ಪಡೆದು 2
ಹಲವು ವಿಧದ ಪುಣ್ಯ ಫಲವ ನೀಡಲು ಲಕ್ಷ್ಮಿ
ಲಲನೆ ಪದ್ಮಜೆಯರ ಬಲಗೊಳ್ಳುತಾ
ಕಲಿಯುಗದಲಿ ಬಂದು ನೆಲೆಯಗೊಳ್ಳಲು ಶೇಷಾ-
ಚಲನೆಂದು ಹರಿಗೆ ನಿಶ್ಚಲವಾದ ನಿಲಯಾಗಿ 3