ಅನುದಿನ ಮರೆಯದೆ ಮರೆಯದೆ ಪ
ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು 1
ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ2
ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ3
ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು ನುಡಿವ ಹರಿ ನಾಮಾಮೃತವೇ ತೀರ್ಥಎನ್ನ ಮನವೆಂಬುದೆ ದಿವ್ಯ ಸಿಂಹಾಸನ 4
ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆಅನ್ಯವಾದ ಮಂತ್ರ ತಂತ್ರವ್ಯಾಕೆಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ 5