ಕೃಷ್ಣ ರುಕ್ಮಿಣಿ ವಿವಾಹದೈದು ದಿನದಲ್ಲಿ
ಅರ್ಥಿ(ಯಿಂ)ಂದೋಕುಳಿಯನಾಡಿ
ಕುಂಕುಮ ಗಂಧ ಬುಕ್ಕಿ ್ಹಟ್ಟಲೂ(ಲುರು?) ಟಣಿಯ ಮಾಡಿ
ಆರತಿನೆತ್ತಿ ಮುತ್ತೈದೇರು ಪಾಡಿ
ವೀಳ್ಯಗಳ ನೀಡಿ ಸರ್ಪಶಯನನು ತನ್ನ ಸತಿಯ
ಎತ್ತಿ ಬರುವೋ ಕಾಲದಲ್ಲಿ
ಚಿಕ್ಕ ಸುಭದ್ರೆ ತಾ ಬಾಗಿಲು ಕಟ್ಟಿ ತಾ ನಗುತ ನುಡಿದಳು 1
ಪಟ್ಟದರಸಿಕೂಡ ಮತ್ತೆಲ್ಲಿ ಪಯಣ ಈ
ವಾರ್ತೆ ಹೇಳುವುದೆನಗೆ
ಕೇಳುವೆ ಕೊಟ್ಟು ಎನಮನ
ಕಾಮಿತಾರ್ಥವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 2
ನಾರಿಮಣಿಯೆ ನವರತ್ನದ ಹೆರಳು ಬಂ-
ಗಾರ ರಾಗಟೆಯು ಗೊಂಡ್ಯ
ಕಂಕಣ ವಂಕಿ ದ್ವಾರಾ ಹರಡಿಯು ಚೆಂದ
ಒಪ್ಪುವ ಗೆಜ್ಜೆ ನಾಗಮುರಿಗೆಯು
ಕಾಲ ಪೈಜಣ
ಗೆಜ್ಜೆ ರುಳಿ ವೈಡೂರ್ಯದ್ವೊಡ್ಯಾಣವನೆ
ಮಾಣಿಕ್ಯದ್ವಾಲೆ ಮೋಹನ್ಮಾಲೆ ಕೊಡುವೆನು
ಕದವ ಬಿಡು ತಂಗಿ ಕೋಮಲಾಂಗಿ 3
ಪಚ್ಚಮಾಣಿಕದ ಗೊಂಡ್ಯಗಳು ಬಾಜುಬಂದು
ರತ್ನಹ್ಹೆರಳುಬಂಗಾರ
ಕಂಕಣವಂಕಿ ಹಸ್ತಕಡಗವು ದ್ವಾರ್ಯ
ಪುತ್ಥಳಿ ಏಕಾವಳಿಯ ಸರ
ಚಿಂತಾಕು ಸರಿಗೆ ತೆತ್ತಿಸಿಯರಚಂದ್ರರಾಗಟೆÉ ಮತ್ತೆ
ಎನಗಮ್ಮಯ್ಯಕೊಡುವಳು ಅರ್ಥಿಯಿಂದೀಗೆನ್ನ-
ಮನೋರಥ ದಂiÀiಮಾಡಣ್ಣಯ್ಯ ಶ್ರೀಕೃಷ್ಣಯ್ಯ 4
ಹರದಿ ನಿನಗೆ ಹವಳದ ಕಾಲ್ವಜ್ರದ ಮಂಚ
ಜರದ ಸುಪ್ಪತ್ತಿಗೆಯು ಹಾಸಿಕೆ ಲೋಡು
ವರಪೀಠ ವಸನಂಗಳು ಚ-
ಪ್ಪರ ಮಂಚಕ್ಕೊಲೆವೋ ಮುತ್ತಿನ ಗೊಂಚಲು ರವಿಪೋ-
ಲ್ವ ರಥವು ಕರಿತುರಗ ಕರೆವೆಮ್ಮೆ ಗೋವ್ಗಳು
ತರತರದ ಛತ್ತರಿಗೆ ಚಾಮರ ಜರತಾರಂಚಿನ
ಸೀರೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 5
ಪನ್ನಂಗಶಯನ ಕೇಳೆನ್ನ ಗಲ್ಲದಲೊಪ್ಪೋ
ಸಣ್ಣ ಮುತ್ತಿನ ಗೊಂಚಲು
ದ್ರಾಕ್ಷಿಯ ಬಳ್ಳಿ ಹೊನ್ನಾ ್ವಲೆ ಸರಪಳಿಯು ಹೊಸ
ಪ್ರೀತಿಯಲಿನ್ನು ನಾ ಬೇಡಿದ್ದು ಕೊಡುವನು ಮನ್ಮಥನ ಪಿತ
ಎನ್ನ ಮನೋರಥ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 6
ಮುದ್ದು ಸುಭದ್ರ ಮೇಲಾದ ಜೊತೆಯ ಮುತ್ತು
ವÀಜ್ರ ಕೆಂಪನು ಕೆತ್ತಿಸಿ
ಕೊಡುವೆನೀಗ ತಿದ್ದಿ ಮಾಡಿದ ಮೂಗುತಿ ಪಾರ್ಥನ
ರಥಕಿದ್ದು ಆಗುವೆ ಸಾರಥಿ
ನಡೆಸುವೆನು ಕೀರ್ತಿ ಉಗ್ರಸೇನಗೆ ಹೇಳಿ ಇದರೊಳ-
ಗರ್ಧ ರಾಜ್ಯವ ಕೊಡಿಸಿ ನಾ ನಿನ್ನುದ್ದ ಹಣ
ಬಿಡು ತಂಗಿ ಕೋಮಲಾಂಗಿ 7
ಅಚ್ಚುತ ಬಲರಾಮರೆಂಬೊ ಎನಗೆ ಜೋಡು
ಹೆಚ್ಚಿನ ಭುಜಗಳಿನ್ನು
ಯಶೋದ ದೇವಕ್ಕಿ ರೋಹಿಣೀದೇವೇರು ಇರಲು
ತಂದೆ ಶ್ರೇಷ್ಠನಾದ್ವಸುದೇವನು ನೀ
ಕೊಡುವುದೇನು ಮುತ್ಯನಾಗಿದ್ದುಗ್ರಸೇನನು ಮತ್ತೆ ನಾ
ಬೇಡಿದರೆ ಈ ಕ್ಷಣ ಕೊಟ್ಟು ಬಿಡನೇ-
ನಧರ್À ರಾಜ್ಯವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 8
ಎಷ್ಟು ಹೇಳಿದರು ಸನ್ಮತವಿಲ್ಲೆ ಸುಭದ್ರೆ
ಮತ್ತೇನು ಕೊಡಲೆ ನಾನು
ಮನಕೆ ಬೇಕಾದಿಷ್ಟವ ಬೇಡೆ ನೀನು
ಭಾರ ಎಷ್ಟು
ತಡೆಯಲಾರೆನೆ ನೀನು ಕೈಬಿಟ್ಟು ಬಿಡುವೆನು
ಬೆಟ್ಟವನು ಕಿರು ಬೆಟ್ಟಿಲಿಂದೆ ಎತ್ತಿನಿಂತಿದ್ದೇಳು ದಿವಸ
ಕದವ ಬಿಡು ತಂಗಿ ಕೋಮಲಾಂಗಿ 9
ಪಕ್ಷಿವಾಹನ ನಿನ್ನ ಚೊಚ್ಚಲಮಗಳ ಎನ್ನಚ್ಛದ
ಅಭಿಮನ್ಯುಗೆ ಮಾಡುವುದು ಅ-
ಪೇಕ್ಷವಾಗೇದೆ ಎನಗೆ ಬೇಡುವೆನು
ನಿಶ್ಚಯ ಮಾಡಿ ಜನರೊಳಗೆ
ಕೊಡು ಕೀರ್ತಿ ನಿನಗೆ ಪಟ್ಟದರಸಿಯ ಸಹಿತ ನೀ ಒಡಂಬಟ್ಟು
ಎನಗ್ವಚನವನೆ ಪಾಲಿಸು ಕಟ್ಟಿದ್ಹಾದಿಯ
ಬಿಟ್ಟು ಪೋಗುವೆ ದಯಮಾಡಣ್ಣಯ್ಯ ನೀ ಕೃಷ್ಣಯ್ಯ 10
ತರವಲ್ಲೆ ರುಕ್ಮಣಿ ಬೀಗತನವ ಭಾಳ ಪರಿ-
ಯಾಲೋಚನೆ ಮಾಡು
ರುಕುಮನ ಗಡ್ಡ ಶಿರ ಪಟ್ಟಿ ಪನ್ನಿ ನೋಡು
ದೊರೆ ಶಿಶುಪಾಲ ವರನವಸ್ಥೆಯ
ಕೊಂಡಾಡು ಧೈರ್ಯವನೆ ಮಾಡು ಬರೆದು ಓಲೆಯ
ಕಳಿಸಿ ಎನ್ನ ಕರೆಸಿ ಬೆನ್ನ ್ಹತ್ತೋಡಿಬಂದ ಬಿರುದನರಿಯೇ
ನ್ವರ ಶುಭಾಂಗಿನಿ ಕದವ ಬಿಡು ತಂಗಿ ಕೋಮಲಾಂಗಿ 11
ಕೃಷ್ಣ ಸುಭದ್ರೆ ಮಾತುಗಳ ರುಕ್ಮಿಣಿ ಕೇಳಿ
ಮತ್ಯಾತಕೆನ್ನ ದೂರು
ಯತಿಗಳ ಬೆನ್ನ ್ಹತ್ತಿ ಹೋದವರು ದಾರು
ಕೃತ್ಯವ ನಡೆಸಿದರೆನ್ನ ನಾದಿನೇರು ಚಿತ್ರಾಂಗಿಯೇರು
ಹಸ್ತಿನಾವತಿ ಅರಸು ಧರ್ಮರು ಹೆಚ್ಚಿನ್ಹಿರಿ
ಯಣ್ಣಯ್ಯ ಭೀಮನು ಪಾರ್ಥಸುತ ಎನ್ನ
ಸೋದರಳಿಯಗೆ ಕೊಟ್ಟೇನು ತೌರುಮನಿಗ್ಹೆಣ್ಣು 12
ರಂಗ ಸುಭದ್ರೆ ಮಾತಿಗೆ ಬಪ್ಪಿ ್ವ್ವಳ್ಯವ ಕೊಟ್ಟು
ಚಂದ್ರಗಾವಿಯ ಕುಪ್ಪಸ ಜರದ ಪೀ-
ತಾಂಬ್ರದುಡುಗೊರೆ ಕೊಡುತ
ಮುತ್ತಿನ ಹಾರ ತಂದು ಕೊರಳಿಗೆ ಹಾಕುತ
ರುಕ್ಮಿಣಿಯ ಸಹಿತ ಬಂದ ಭೀಮೇಶ ಕೃಷ್ಣ
ಪಾರ್ಥನ ರಂಭೆ ಕನ್ಯವಗೆದ್ದಳೆನುತಲಿ ಸಂಭ್ರಮದಿ
ದೇವೇಂದ್ರ ಬ್ಯಾಗನೆ ಚೆಂದದÀಲ್ಹೂಮಳೆಯ ಕರೆದರು 13