ದುರಿತ ಬ್ರಹ್ಮಾಸ್ತ್ರಜಯಜಯ ಜಯತು ಪ್ರತಿಯಿಲ್ಲದಸ್ತ್ರಾ ಪ
ಉಟ್ಟಿಹ ಕಾಶಿಯ ಉಡಿಗೆತೊಟ್ಟಿಹ ಎದೆ ಕಟ್ಟುಕಟ್ಟಿದ ಖಡ್ಗ ಕಠಾರಿರಕ್ತದ ತಿಲಕವಿಟ್ಟುಮುಷ್ಠಿಯಲಿ ಮುದ್ಗರ ಶೂಲಧನು ಶರವಳವಟ್ಟುಬಿಟ್ಟ ಕಂಗಳ ಕಿಡಿಯುಛಟಛಟ ಛಟವಿಟ್ಟು 1
ಏರಿಸಿ ಪಟ್ಟೆಯ ಹಲಗೆಎಡಬಲ ನೋಡದೆಹರಿಯ ಘನ ಶತ್ರುವಿನನಾಲಗೆ ಹಿಡಿದೆಳೆಯೆವೀರ ಮಂಡಿಯ ಹೂಡಿಅವುಡನೇ ಕಡಿಕಡಿದೇಹಾರಿಸಿದೆ ತಲೆಗಳನುಹಾ ಎನುತಲಿ ಬಿಡದೆ 2
ಮುಕುಟ ಕಾಂತಿಯಮಿಹಿರಕೋಟೆಯ ಕಳೆಯು ಹಳಿಯೆಲಕಲಕನೆ ಬೆಳಗುತಿಹಕುಂಡಲ ಸರಪಳಿಯೆಚಕಚಕನೆ ಮೂಗುತಿಯಮುತ್ತು ಹೊಳೆಹೊಳೆ ಹೊಳೆಯೇಸಬಲೆ ಎನಿಪ ಚಿದಾನಂದಬಗಳಾಂಬ ತಿಳಿಯೆ3