ಮಾಧವಾ ನಿಮ್ಮ ನಾಮ ಸಾಲದೇ ಪ
ಪರಗತಿ ಸುಖವನು ಸ್ಮರಿಸಲು ನಿನ್ನನಾ||
ಪರಿಪರಿ ತಪದಿಂದಾ ಚರಿಸುವ ದ್ಯಾತಕೆ ನಾ 1
ಕರಿಕಿರಿಯನ್ನಲು ಶರೆಯನು ಬಿಡಿಸಿದ|
ಶರಣ ಪ್ರಹ್ಲಾದನ ದುರಿತದಿ ಕಾಯ್ದ2
ದ್ರೌಪದಿ ಸ್ಮರಿಸಲು ಆಪತ್ತ ಹರಿಸಿದ|
ಆ ಪತಿತ-ಜಮಿಳ ಪಾಪದಿ ತರಿಸಿದ 3
ನೆನೆಯಲು ಪಿಂಗಳಾ ಕ್ಷಣದಿ ಗತಿಯ ಕೊಟ್ಟಾ|
ಬಿನುಗು ಮಂಡೂಕನ ವಿಮಾನದಿ ಮೆರೆಸಿದಾ4
ದುರುಳನ ಕೈಯಿಂದ ಹರಣಿಯ ಕಾಯಿದಾ|
ಗುರಿಯಾ ತಪ್ಪಿಸಿ ಸೆರೆ ಹೊರೆದ ಕಪೋತಕ5
ಹಲವು ಸಾಧನದಿಂದ ಬಳಲುವ-ದ್ಯಾತಕ|
ತಿಳಿದವ ಬೇಡಿದ ಫಲವನೇ ಕೊಡುತಿಹ 6
ತಂದೆ ಮಹಿಪತಿ ನಂದನ ಸಾರಥಿ|
ಎಂದೆಂದು ನನಗಿದೆ ಛಂರದಿ ಕುಡು ಕಂಡ್ಯಾ 7