ನೋಡು ನೋಡು ನಿನ್ನ ಹಿತವಾ ಪ
ಇಂದು ನರದೇಹದಲ್ಲಿ ಬಂದುದೇನೋ |
ಒಂದು ಪಥವರಿಯದಾ ಛಂದವೇನೋ ಅ.ಪ
ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ |
ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ |
ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ |
ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು |
ಬರಡ ಜನ್ಮ ಮಾಡ ಬ್ಯಾಡಾ 1
ನೀಗಿ ಕೇಳು ಕೇಳು |
ಆದಿ ಸನ್ಮಾರ್ಗವ ಕೇಳು ಕೇಳು |
ಸಾಧನವ ಬಲಿಯೋ ನೀ |
ಕಂದ ಭೂಮಿಯ ಮೇಲೆ ಹನಿ ಮಾಡದೇ 2
ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ|
ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ |
ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ |
ಮರೆಯಬೇಡಾ ಮನವೇ 3