ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರೇನೆಂಬುರೈ|ಹರಿ ಭಕ್ತರಿಗೆ|ದಾರಲ್ಲವೆಂಬುರೈ ಪ ಗುರುವಿನಂಘ್ರಿವಿಡಿದು|ಗುರುತುಕೀಲವರಿತು ನಿಜಾ| ಪರಮಾನಂದ ಸುಖಾ|ಸುರಸನುಂಬುವರಿಗೇ 1 ಕುತ್ಸಿತ ಮಾರ್ಗವನೆಲ್ಲಾ|ಕೊಚ್ಚಿಜರಿದು ಧರಿಯೊಳು| ಅಚ್ಯುತ ಪರದೈವನೆಂದು|ನೆಚ್ಚಿದ ಮಹಿಮೆಗೆ 2 ಮಾಧವ ಮುದ್ರೆಯಿಂದ|ದ್ವಾದಶ ನಾಮವನಿಟ್ಟು| ಪದುಮಾ ತುಳಸೀಸರ|ಹೃದಯದಲ್ಲಿ ಮೆರೆವಂಗೆ 3 ನಷ್ಟನೃಪರಾ ಮನೆಯಾ|ತನಿಷ್ಟೆಯೊಳು ಲೆಕ್ಕಿಸದೆ| ಹುಟ್ಟಿದ ಲಾಭದಲ್ಲಿ|ತುಷ್ಟಿ ಬಟ್ಟಿರುವಂಗೆ 4 ಅವರವರಂತೆ ಲೋಕ|ದವರಿಗೆ ತೋರುತಾ| ವಿವರಿಸಿ ವಿವೇಕ ಹಾದಿ|ಭವದಾ ಬೇರಿಳಿದಂಗೆ 5 ತಾಳದಂಗಡಿಗೆಯ ಸಿಡಿದು|ಮೇಳ ಭಾಗವತರೊಳು| ಶ್ರೀಲೋಲನನು ಪಾಡಿ|ನಲಿದಾಡುತಿಹರಿಂಗೆ 6 ತಂದೆ ಮಹಿಪತಿ ನಿಜಾ|ನಂದನ ಸಾರಿದ ನುಡಿ| ಹೊಂದಿ ಭಾವಭಕ್ತಿಯಿಂದ|ಛಂದವಾಗಿಪ್ಪರಿಂಗೆ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು