ಹಿತ ನೋಡಿ ಸಂತರ ಕೂಡೀ ಪ
ಹಿತ ನೋಡಿ ಸಂತರ ಕೂಡೀ |
ಮತಿ ನಿಜ ಮಾಡಿ |
ಶ್ರೀ ಪತಿಯ ಕೊಂಡಾಡಿ 1
ದುರಿತ ವಿಭಂಗಾ |
ನೆರೆ ಕರುಣಾಂಗದಿ |
ಹೊರೆವನು ರಂಗಾ 2
ಪರಿ |
ರಂಜಿಸುತಿಹ ತೇಜಃ |
ಪುಂಜನ ನೋಡಿ 3
ಕಂಡಪದಕ ಹರಿದಂಡಲಿಯದೆ ನೆಲೆ |
ಗೊಂಡ ವಿವೇಕದ |
ಪಂಡಿತರಾಗಿ 4
ತಂದೆ ಮಹಿಪತಿನಂದನು ಸಾರಿದಾ |
ಬಂದ ಜನುಮಕಿದು |
ಛಂದದು ನೋಡಿ 5