ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನಯ ಪಾದಾ ವಂದಿಸುವೆ ನಾನು ಛಂದದಿಂದಾ ಪ. ಮಂದಾರೊದ್ಧರನ ಪಾದಾ ಸೇವಕರೆಂದೆನಿಸಿದಿ ದುರ್ಮಾಯವಾದಿಗಳನು ಜಯಸಿದಿ ಬ್ರಹ್ಮರಾಯನೆಂದೆನಿಸೀದಿ ಅ.ಪ. ಅಂಜನಿಸುತನೆಂದೆನಿಸಿದೆ ಸಂಜೀವನವ ತಂದಿ ಕಂಜಾಕ್ಷಿಮುಖಿಗೆ ಉಂಗುರವನ್ನಿತ್ತಿ ವನವ ಕಿತ್ತಿ ಸಂಜೀವರಾಯನೆ ದುರುಳ ರಾವಣನ ಸಂಹರಿಸಿದಿ ವಿಭೀಷಣನಿಗೆ ರಾಜ್ಯಭಾರದಲ್ಲಿ ನಿಲ್ಲಿಸಿದಿ ಅಯೋಧ್ಯನಗರಿಗೆ ತೆರಳಿದಿ 1 ಕುಂತಿಯಾ ಕಂದಾ ಕೌರವಾದಿಗಳ ಕೊಂದ ಯುದ್ಧದಲ್ಲಿ ಪ್ರಚಂಡಾ ಭಾರತಿಗೆ ಗಂಡಾ ಲಂಡದುಷ್ಯಾಸನನ ತುಂಡು ತುಂಡುಮಾಡಿ ಸೀಳಿದ ವಿರಾಟ ನಗರದಿ ಸಂಚರಿಸಿದಾ ಕೀಚಕಾದಿಗಳ ಸಂಹರಿಸಿದಾ ಪಾಂಚಾಲಿಗೆ ಸೌಗಂಧೀಕುಸುಮವನೆ ತಂದಾ ಆನಂದಾ 2 ಮಧ್ಯಗೇಹನಲ್ಲಿ ಉದ್ಭವಿಸಿದೆಯೋ ನೀ ಇಲ್ಲಿ ಅದ್ವೈತ ಮತವೆಲ್ಲಾ ಕಾಲಿಲೆ ವದ್ಯೋ ಗೆದ್ಯೋ ಮಧ್ವಮತವೆಲ್ಲ ಉದ್ಧಾರ ಮಾಡಿದಾ ಬದರಿಕಾಶ್ರಮಕೆ ಪುನರಪಿ ಪೋದಾ ವ್ಯಾಸಮುನಿ ಪಾದಕೆ ಅಭಿವಂದಿಸಿದಾ ಉಡುಪಿಯೊಳು ಕಾಳಿಮರ್ಧನಕೃಷ್ಣನು ನಿಲ್ಲಿಸಿದಾ 3
--------------
ಕಳಸದ ಸುಂದರಮ್ಮ