ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆನು ವಿಠ್ಠಲನ ದಣಿಯ ಪ. ನೋಡಿದೆನು ವಿಠ್ಠಲನ ರೂಪವ ಪಾಡಿದೆನು ಮನದಣಿಯ ಹರುಷವು ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ ಬೇಡಿ ಮನಸಿನಭೀಷ್ಟ ಸಂತತ ನೀಡು ನಿನ್ನಯ ಚರಣ ಸ್ಮರಣಿಯ ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ 1 ಪಂಚ ಪಂಚ ಉಷಃ ಕಾಲದೀ ಪಂಚ ಬಾಣನ ಪಿತಗೆ ಆರುತಿ ಮುಂಚಿನೊಸನಗಳೆಲ್ಲ ತೆಗೆಯುತ ತೈಲವೆರೆಯುವರೂ ಪಂಚರೂಪಗೆ ಚಂದ್ರಭಾಗೆಯ ಪಂಚ ಗಂಗೋದಕಗಳೆರೆಯುತ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು 2 ಬೆಣÉ್ಣ ಬಿಸಿನೀರೆರೆದು ಕೃಷ್ಣಗೆ ಸಣ್ಣ ವಸ್ತ್ರದಿ ವರಸಿ ಮೈಯ್ಯನು ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ ಬಣ್ಣದೊಸ್ತ್ರದ ಪಾಗು ಸುತ್ತುತ ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ ಸಣ್ಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ 3. ಗಂಧ ಅಕ್ಷತೆ ಪುನುಗು ಜವ್ಜಾಜಿ ಛಂದದಾ ಕಸ್ತೂರಿ ತಿಲಕವು ಸುಂದರಾಂಗದ ಮುಖಕೆ ಕನ್ನಡಿ ತೋರಿಸುವರಿಂತೂ ಅಂದದಾ ಪಕ್ವಾನ್ನ ತರುತಲಿ ಇಂದಿರೇಶಗೆ ಅರ್ಪಿಸುತ್ತಲಿ ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ 4 ಮಾಡಿ ಪಂಚಾರ್ತಿಗಳ ವಿಠಲಗೆ ಪಾಡುವರು ಮನದಣಿಯ ಭಕ್ತರು ನೀಡುವರು ಪಂಚಾಮೃತಂಗಳ ಬೇಡುವರು ಹರಿಯ ರೂಢಿಯೊಳು ಪಂಡರಿಯ ಕ್ಷೇತ್ರವ ಬೇಡಿದವರನು ಪೊರೆವ ಗೋಪಾಲಕೃಷ್ಣವಿಠ್ಠಲನು 5
--------------
ಅಂಬಾಬಾಯಿ
ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ ಪ ಛಂದದಾರುತಿ ತಂದು ಬೆಳಗಿರೆ ಇಂದುಧರಸುತ ಮಂದಜಾಸನಗೆ ಅ.ಪ. ಮೋದಬಡುತಲಿ ಮೋದಪುರ ನಿವಾಸ ಜನರಭಿಲಾಷೆ ಸಲಿಸುವ ಚಾರುನವಕುಶ ತೀರನದಿ ಧರ ಧೀರ ಸುಗುಣ ಸುಶಾಸ್ತ್ರ ಪೇಳ್ವಸುತನಾರ್ಯರಿಗೆ ಬಂದು ಬೇಗನೆ 1 ಸನ್ನುತ ಬ್ರಹ್ಮೇಶತಂದೆವರದಗೋಪಾಲವಿಠ್ಠಲನ ದಾಸನೆನಿಪಗೆ ಬಂದು ಬೇಗನೆ 2
--------------
ತಂದೆವರದಗೋಪಾಲವಿಠಲರು
ಶುಭ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು 1 ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ 2 ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ 3 ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ 4 ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ 5 ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ 6 ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ 7 ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು 8 ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು 9 ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ 10|| ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ 11
--------------
ಗುರುರಾಮಲಿಂಗ