ಹರಿದಾಸನವನೇ ನೋಡಿ|
ಬರೇ ವೇಷ ದೋರಲ ಬೇಡಿ ಪ
ಒಂದರ ಘಳಗೆಯ ಕುಂದದಿ ಕಳೆಯಾ|ಮು|
ಕುಂದನ ನಾಮವ ಛಂದದಲಿಹ 1
ಅನ್ಯರ ದೂಷಿಸಿ ತನ್ನನೇ ಹೊಗಳನು|
ಸಣ್ಣ ದೊಟ್ಟದರಲಿ ಘನ್ನರಿತಿಹ 2
ಹುಲ್ಲ ಮನುಜರಿಗೆ ಹಲ್ಲವದೆರಿಯದೆ|
ಫುಲ್ಲನಾಭನಪದದಲಿಹ ಮನ 3
ಮುಂದಿನ ಹಾನಿಯು ಇಂದಿವೆ ತೋರಲಿ|
ಮುಂದಿಟ್ಟಟಡಿಯನು ಹಿಂದಕೆಳೆಯ 4
ನುಡಿವದು ಸಲಭ ನಡೆವುದು ದುರ್ಲಭ|
ನಡೆನುಡಿಯಲಿ ಸಮಧೃಡಗಂಡಿಹ 5
ಹಂಗವಳಿದು ಸತ್ಸಂಗದಿ ಶ್ರವಣದಿ|
ಕಂಗಳ ಸಿರಿಸುಖ ಮಂಗಳಲಿಹ 6
ತಂದೆ ಮಹಿಪತಿ ನಂದನ ಪ್ರಭುದಯ|
ದಿಂದ ಭವಾಲಯ ಸಂದ ಜರಿದ 7