ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣರೆಳಕಂದಿ ನೀನ್ಯಾಕೆ ಕರುಣಿಸಲೊಲ್ಲಿ | ದುರಿತ ಭಯ ಪರಿಹರಿಸಿ ಸಲಹೆನ್ನ ತಂದೆ ಪ ಬಂದರ ವಿಭೀಷಣಗ ಅಭಯಕರವಿತ್ತೇ | ಬಂಧನಕ್ಕೋಳಗಾದ ಗಜರಾಜನನು ನೆಗಹಿ | ಛಂದದಭಿಮಾನುಳಿಹಿ ದ್ರೌಪದಿಯ ಕಾಯ್ದೆ 1 ಕಲುಷವಾರಿಸಿ ಮುನಿ ಸತಿಯ ನೀನುದ್ದರಿಸಿ | ಒಲಿದು ಧ್ರುವಗಾನಂದ ಪದವಿತ್ತೆ ಧರಿಲಿ | ಸಿಲುಕಿರಲು ಲಾಕ್ಷಗೃಹದಿ ಪಾಂಡವರನುಳುಹಿ | ಲಲನೆ ಗರ್ಭದಿ ಪರೀಕ್ಷಿತನ ಕಾಯ್ದೆ ಸ್ವಾಮಿ 2 ಅವರ ದಾಸಾನುದಾಸರ ಭಾಗ್ಯವೆಮಗಿಲ್ಲಾ | ತವನಾಮಧಾರಕೆನಿಸಿದ ಬಿರುದಿಗಿಂದು | ಕುವಲಯ ಶ್ಯಾಮ ಗುರು ಮಹಿಪತಿ ಸುತ ಪ್ರಭುವೆ | ಯಮನ ಬಾಧೆಯ ಬಿಡಸೋ ಬ್ಯಾಗೊದಿಗಿ ಬಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು