ತುಪಾಕಿ ಬಾರೊ ಮಾಡೊ ಮನುಜ
ತುಪಾಕಿ ಬಾರೊ ಮಾಡೊ ಪ
ತುಪಾಕಿ ಬಾರೊ ಮಾಡೊ ಸೊಬಗಿನಿಂದ
ನೀ ಭುಜಗಶಯನ ಶ್ರೀಹರಿಯ ಧ್ಯಾನವೆಂಬ ಅ.ಪ
ಚಿತ್ತಶುದ್ಧಿಯೆಂಬ ಮದ್ದು ತುಂಬಿ
ಭರ್ತಿಮಾಡಿಕೊಳವೆಯ
ಸತ್ಯಗುಣವೆಂಬ ಛಡಿ ಪಿಡಿ
ದೊತ್ತಿ ಜಡಿಯೊ ಭಕ್ತಿ ಬಾಹ್ವಿನಿಂದ
ಎತ್ತಿ ಸಾಮಥ್ರ್ಯದಿ
ಮಿಥ್ಯದೇಹವನು
ಹತ್ತಿ ಬೇಂಟೆನಾಡೊ 1
ಅಂಟಿಕೊಂಡು ಬರುವ ಬೇಗ ತಿಳಿ
ಎಂಟು ಕೋಣನ ಸುಳಿವ
ಗಂಟಲಕ್ಕೆ ಹಾರುತಿರುವ ಆರುಹುಲಿ
ಬಂಟನಾಗಿ ತರಿಯೆಲವೊ ವೈ
ಕುಂಠನ ಕೃಪೆಯೆಂಬ
ಬಂಟಬಲವು ಕೂಡಿ
ಬೇಂಟೆನಾಡೆಲೊ 2
ಮೂರುಮಂದಿರವ ಕಟ್ಟಿಕೊಂಡು
ಧೀರನಾಗಿ ನಲಿಯೊ
ಸಾರಿಬರುವ ಏಳು ಕೊಳ್ಳಗಳ
ಹಾರಿ ಮುಂದಕೆ ನಡೆಯೊ
ಘೋರ ದುರ್ಗುಣ ಮೃಗ
ಸೂರೆಮಾಡಿ ಮಹಧೀರ
ಶ್ರೀರಾಮನ ಚಾರುಚರಣ ಸೇರು 3