ಭೋಜನ ಮಾಡೈಯ ಶ್ರೀರಾಮಚಂದ್ರ ಪ
ರಾಜೀವಾನಯನ ಸ್ವರಾಜಾನುಜ ಮಹಾ
ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ
ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು
ಹಪ್ಪಳ ಸಂಡಿಗೆ ಶಾಖಗಳೂ
ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ
ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು 1
ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು-
ಚ್ಚೋರೆಯು ಅತಿರಸ ಹೊಯಗಡಬೂ
ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ
ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ2
ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ
ಬೆಂಡು ಸೋಮಾಶಿಬತ್ತಾಸು ಫೇಡಾ
ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ-
ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ 3
ಪನಸು ಜಂಬೂ ಕದಳಿನಾರಂಗ ಎಳನೀರು
ಪಾನಕ ತಕ್ರಬೆಣ್ಣೆಯು ಮೊಸರೂ
ಸ್ವಾದೋದಕ ಮೊದಲಾಗಿ ಶ್ರೀ
ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ 4
ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ
ವಿತ್ತಸಮೇತವಾದಿದನು ಕೈಕೊಂಡು ನೀ 5
ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ
ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ6
ನವ್ಯ ಸುಗಂಧ ಪುನರ್ಧೂಪವರ್ಪಿಸಿ
ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು
ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು 7
ಅವ್ಯಯಾನಂತ ಜಗದ ಬದುಕು ನೀನೆಂದು
ಸೇವ್ಯಸೇವಕನಾಗಿರುವೆ ಎಂದು
ಭವ್ಯಚರಿತ್ರರು ಪೊಗಳುವರೈ ನಿನ್ನ
ಸವ್ಯಸಾಚಿಯ ಸೂತ ಗುರುರಾಮ ವಿಠಲನೆ 8