(ಶ್ರೀಹರಿಯ ಷಣ್ಮಹಿಷಿಯರ ಸ್ತುತಿ)
ಹರಿಮಾನಿನಿಯರಾರು ಮಂದಿ
ಸುಪ್ರವೀಣೆ ಲಕ್ಷಣೆ ಕಾಳಿಂದಿ
ಜಾಣೆ ಸಖಿವಿಂದೆ ಜಾಂಬವತಿಯರಿಗೆ
ನಾ ನಮಿಸುವೆ ಮನದೊಳಗೆ1
ತಮ್ಮ ಪತಿಯರಿಂದೊಡಗೂಡಿ
ಮನ್ಮಾನಸಮಂ ಮನೆಮಾಡಿ
ನಿರ್ಮಲ ಬುದ್ಧಿಯ ಪ್ರೇರೇಪಿಸಲಿ
ಸುಮ್ಮಾನ ಪಾಲಿಸಲಿ2
ಭಕ್ತಿ ವಿರಕ್ತಿ ಜ್ಞಾನ ಮ-
ಚ್ಚಿತ್ತದೊಳಿರಲಿ ಧ್ಯಾನ
ಕರ್ತ ಲಕ್ಷ್ಮೀನಾರಾಯಣನ ನಾಮ-
ಕೀರ್ತನೆಗೈವುದೆ ನೇಮ3
ದುರ್ಗಾದೇವಿಯ ಸ್ತುತಿ