ಮರ್ಮವ ತಿಳಿದವಗೆ ಈ ಕಾಯದ
ಕರ್ಮದ ಗೊಡವೆಯುಂಟೇ
ನಿರ್ಮಲಾತ್ಮಕಗೆ ಸಮರ್ಪಣೆಯೆಂಬ ಸ್ವ
ಧರ್ಮ ಮೂಲ ಮಂತ್ರ ಸೋಹಂವೆಂದೆಂಬ ಪ
ಜ್ಯೋತಿ ಹಸ್ತದೊಳಿರಲು ಕತ್ತಲೆಗೆ ಬ
ದ್ಯೋತವ ಬಯಸುವರೇ
ಪಾತಕ ಪುಣ್ಯ ಶುಭಾಶುಭವೆಂಬ ವಿ
ಘಾತಿಯಾಗುವ ಅವಧೂತ ಮಂತ್ರವೆಂಬ 1
ಶರೀರಾತ್ಮಗ್ರಹವು ಪೂಜೆಗೆ ಸಹಜ
ಪರಿಪರಿ ವಿಷಯ ಭೋಗಾ
ನಿದ್ರೆ ಸಮಾಧಿ ಸಂಚಾರ ಪ್ರದಕ್ಷÀಣೆ
ನಿರುತ ಆಡುವ ವಾಣಿ ಸ್ತೋತ್ರಗಳೆಂದೆಂಬ 2
ಬರಿದೆ ಕಾಯದ ಸುಖವು ಕರ್ಮಾ
ಕರ್ಮ ಪರಿಪೂರ್ಣಾತ್ಮಕಗರ್ಪಿಸಿ
ಗುರು ವಿಮಲಾನಂದಭರಿತನಾಗಿಹ ಮಂತ್ರೋ
ಚ್ಚರಣೆಯೊಳಿರುವುದು ದೊರಕೊಂಡನೆಂದೆಂಬ 3