ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮನ ತೊಡೆಯ ಮೇಲೆ ನಮ್ಮ ಕೃಷ್ಣ ಸುಮ್ಮನೆ ಮಲಗಿಹನು ಪ ಸುಮ್ಮೊನದಿ ಸುಖದಿಂ ನಲಿದಾಡುತ ಅ.ಪ ಮಣ್ಣ ಮೆದ್ದುದ ಕಂಡು ಗೋಪಿದೇವಿ ಚಿಣ್ಣನ ಬಾಯಿನೋಡೆ ಕಣ್ಣಿಗೆ ಬ್ರಹ್ಮಾಂಡ ತೋರಿಸಿದಂಥ ಪರಬ್ರಹ್ಮ 1 ತರಳ ತರಲೆ ಮಾಡೆ ತಾಯಿಯು ಹೊರಳೆಗೆ ಕಟ್ಟಲಾಗಿ ಸುರತರುಗಳ ಮುರಿದು ನಿಜತರವ ಗೈದ ನಿತ್ಯಾತ್ಮ 2 ಕಾಲಲೊದೆದು ಕೊಂದು ಧಾತಾ ದೇವೇಂದ್ರರ ಶಿರಬಾಗಿಸಿದ ಪೂತಗುಣ 3 ಹಾಲುಕೊಡೆನೆ ಬಾಲ ಸಂಜೆಗೆ ಹಸುವ ಕರೆವೆನೆನಲು ಲೀಲೆಯಿಂ ಕಣ್ಣ ಮುಚ್ಚಿ ಕತ್ತಲೆ ಕವಿಸಿದ ದೈವ 4 ಗೋಪೀಜನಗಳೊಡನೆ ಗೋಪಾಲನು ಸ್ತ್ರೀಲೋಲನಾಗಿ ಕುಣಿದು ರಥಾಂಗಪಾಣಿ 5 ನವನೀತ ಚೌರ್ಯಮಾಡಿದ ನಾರೀಜನರ ವಸ್ತ್ರಾಪಹರ ಗೈದ ಅವನೀಭಾರವ ಕಳೆದ ಮಾಯಾಮೂರ್ತಿ ದೇವಶಿಖಾಮಣಿ6 ಭೂಮಿಪಾಲನೆ ಮಾಡಿದ ಹಿಂಸಕರ ವಂಶವಳಿಪ ಹಂಸಲೋಲ ಜಾಜಿಶ್ರೀಶ 7
--------------
ಶಾಮಶರ್ಮರು
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಸಕಲ ದಿವಿಜಾರಾಧ್ಯ ಚರಣ ಪ ಕಂದರ್ಪ ಕೋಟಿ ಮೋಹನ್ನ ಕಾಯಾ | ಕಂಸ ಚಾಣೂರ ಮರ್ದನಕಾಲಿಯ ವಿಷಕಲಿಲ ಸಲಿಲಯಾನಕಲಪ್ರಾಣ ಗೋಗೋಪ ಜೀವನಾ | ಈಯ್ಯಾ ಈಯ್ಯಾ || ಗೋಕುಲದಿ ಗೋಪಿಯರ ಮನೆಗಳಲಿ ಗೋರಸ ಚೌರ್ಯ ಸಂಪನ್ನಾ |ಮಧುರ ಮುರಲಿ ನಿನಾದದಿಂದ ಮೋಹಿಪ್ಪ ||ಮೌನಿಗಳ ಮಾನಸಗಳಲ್ಲಿ | ಸಸ ಸಾನಿಸಾನಿ ನಿಸನಿ |ನಿಸನಿ ಸಾಸನಿನಿ ಸರಿಗರಿ ಮಗಗರಿಸ ನಿಧನಿಧ ನಿಧಪಮ || ಧಿಕ್ಕತಾ ಧಿಕ್ಕತಾ ಧಿಮಿ ಧಿಮಿಕಿತಾ ಧಿಮಿಕಿತಾ ಗಿಕಿಟ ತೋಂ |ಗಿಕಿಟ ತೋಂ ಗಿದಿಗದಿಗ ಥೈಯಾ ಥೈಯಾ || ಪರಿ ನಂದನಂಗಳದಲ್ಲಿ ಕುಣಿಕುಣಿದಾಡುವ ಶ್ರೀವಿಠ್ಠಲನಪಾದಾಂಬುಜದ ಭಜನದಿಂದೆ ತರಿಸುವೆನೆಂದು ಪಾಡುವೆನುಗೀತ ಪ್ರಬಂಧ ಬರೆಹಗಾರ ರುಕ್ಮಾಂಗದನು ||
--------------
ರುಕ್ಮಾಂಗದರು
ಶ್ರೀ ಶುಕ್ಲನಾಮ ಸಂವತ್ಸರ ಸ್ತೋತ್ರ147ಶುಕ್ಲ ಸಂವತ್ಸರದ ಮುಖ್ಯ ಸ್ವಾಮಿಯು ಸುಖಪೂರ್ಣ ಶೋಕಾದಿದೋಷ ದೂರ ಶ್ರೀ ಉಪೇಂದ್ರನಿಗೆ ಆನಮಿಸುವೇ ಪ.ದೇವಗುರುಬೃಹಸ್ಪತಿ ದೇವೇಂದ್ರ ಮೊದಲಾದ ಸರ್ವ ದೇವ ವಿಧಶಿವ ವಿಧಸೇವ್ಯಶ್ರೀ ಲಕ್ಷ್ಮೀಶ ಸರ್ವೇಶನು ತಾನೆಈ ವರುಷರಾಜ ಶುಕ್ರನೊಳು ಮತ್ತು ವರುಷನಿತ್ಯನಾಯಕರುಸಚಿವ ಸೇನಾ ಸಸ್ಯ ರಸ ನಿರಸಾಧಿ ಪತಿಗಳೊಳಾಗಿರುವ 1ಇದ್ದು ಶೃತಿಗಳ ನಡೆಸಿ ಲೋಕ ಜನರಿಂದ ವಿಹಿತಾ ವಿಹಿತಸಾಧನ ಗೈಸಿ ಸಜ್ಜನರಿಗೆ ಕಷ್ಟ ಬಾರದೇ ಕಾಯುವಸಾಧು ಸಾಧನ ಮಾಳ್ಪದಕೆ ಅನುಕೂಲ ಶುಕ್ಲ ಸಂವತ್ಸರಸಂತಾಪ ಸಿಡಿಲು ಗಾಳಿ ಔಷ್ಣವ ಜಯಿಸಬಹುದು ಹರಿದಯದಿ 2ಚೌರ್ಯ ಅಸತ್ಯ ನಿಂದಾ ನಿಷ್ಠುರ ದುಷ್ಟ ತನಾದಿಗಳುಸಂತ್ಯಜಿಸಿಪತಿತಾಯಿ ತಂದೆಗುರುಸೇವಾಹರಿಪೂಜೆಕಾಯವಾಙ್ಮನದಿಂದ ಮಾಳ್ಪರಿಗೆ ಮಧ್ವಹುದಬ್ಜಗನುತೋಯಜಾಸನ ಪಿತ ಪ್ರಸನ್ನ ಶ್ರೀನಿವಾಸ ಒಲಿದು ಸಂರಕ್ಷಿಸುವನು 3| ಶ್ರೀ ಕೃಷ್ಣಾರ್ಪಣಮಸ್ತು |
--------------
ಪ್ರಸನ್ನ ಶ್ರೀನಿವಾಸದಾಸರು
ಹಂಚಿನ ಇದಿರಲಿ ಹಲ್ಲನು ತೆಗೆಯಲುಮಿಂಚುವ ಕನ್ನಡಿಯಾದೀತೆ ? ಪ.ಮಿಂಚಿನ ಬೆಳಕಲಿ ದಾರಿಯ ನಡೆದರೆಮುಂಚುವ ಊರಿಗೆ ಮುಟ್ಟೀತೆ ? ಅಪಬಾಲರ ಭಾಷೆಯ ನಂಬಿ ನಡೆದರೆಶೀಲದ ಕೆಲಸಗಳಾದೀತೆ ?ಜೋಲುವ ಹೋತಿನ ಮೊಲೆಗಳ ಹಿಂಡಲುಹಾಲಿನ ಹನಿಯದು ಹೊರಟೀತೆ ?ಕಾಲುವೆ ಬಚ್ಚಲಕುಣಿ ನೀರಿಗೆ -ಘನಬಾಳೆಯ ತೋಟವು ಆದೀತೆ ?ಮೇಲುಬಣ್ಣಾದಾ ಆಲದ ಹಣ್ಣುನಾಲಿಗೆಸವಿಯನು ಕೊಟ್ಟೀತೆ ? 1ಭಾಷೆಯ ನುಡಿಗಳಿಗಾಸೆ ಮಾಡೆ ಮನದಾಸೆಯ ಕಾರ್ಯಗಳಾದೀತೆ ?ದೋಸೆಯ ಛಿದ್ರದಿ ಆರಿಸೆ ಕಾಳಿನರಾಶಿಯು ಹಸನವು ಆದೀತೆ ?ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆಮಾಸದ ಮನೆ ಬದುಕಾದೀತೆ ?ಕಾಸಾರದೆದುರಿಗೆ ಹರಿಕಥೆ ಹೇಳ್ದರೆಸೋಸಿ ಕೇಳ್ದು ತಲೆದೂಗೀತೆ ? 2ಮಿಥ್ಯಾವಚನಿಯ ಮಾತನು ನಂಬಲುಹೊತ್ತಿಗೆ ಅದು ಬಂದೊದಗೀತೆ ?ಸತ್ತವನೆದುರಿಗೆ ಸುತ್ತಲು ಕುಳಿತುಅತ್ತರೆ ಆ ಹೆಣ ಕೇಳೀತೆ ?ನಿತ್ಯನಪುಂಸಕನೈದಲು ತರುಣಿಗೆಚಿತ್ತ ಸುಖವು ಸೂರಾದೀತೆ ?ಕುತ್ತಿಗೆಗೊಯ್ಕನ ಕಾಲು ಹಿಡಿದರೆಹತ್ಯದೊಳ್ಹೇಸಿಕೆಹುಟ್ಟೀತೆ ?3ಬೋರಗಲ್ಲಿನ ಮುಂದೆ ಬಡತನ ಹೇಳಲುಸಾರಸುಖಕ್ಕನುವಾದೀತೆ ?ಚೋರನು ಚಂದ್ರಗೆ ಕೈಮರೆ ಮಾಡಲುಚೌರ್ಯಕೆ ಕತ್ತಲು ಒದಗೀತೆ ?ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾಹಾರಿಗೆ ಮೀನವು ದೊರಕೀತೆಕಾರಣವಿಲ್ಲದ ಲೌಕಿಕ ಕಥೆಯಿಂಘೋರನರಕ ಭಯ ತಪ್ಪೀತೆ ?4ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲುಹೊಟ್ಟೆಗೆಓದನ ಸಿಕ್ಕಿತೆ ?ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲುಹೊಟ್ಟೆಯಲಿ ಕಳವಳ ಹುಟ್ಟೀತೆ ?ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲುಕೆಟ್ಟ ಮಾತು ಅದು ಬಿಟ್ಟೀತೆ?ದಿಟ್ಟ ಪುರಂದರವಿಠಲರಾಯನಬಿಟ್ಟರೆ ಸದ್ಗತಿಯಾದೀತೆ? 5
--------------
ಪುರಂದರದಾಸರು