ಹೊಂದಿ ಬದುಕಿರೈಯ್ಯಾ ದೇವನಾ | ತರು |
ಣೇಂದು ಶೇಖರ ಉಮಾ ಧವನಾ ||
ವಂದಿಸಿದವರಘವೃಂದ ನಿವಾರಿಸಿ |
ಕೈವಲ್ಯ ತಂದು ಕೊಡುವನಾ ಪ
ಸ್ಮರಿಸಿದವರ ಬದಿಯಲಿರುವಾ | ತನ್ನ |
ಶರಣರಿಷ್ಟಾರ್ಥವಗರವಾ ||
ಕರುಣದಿ ಪತಿತರುದ್ಧರಿಸಲು | ತಾರಕ |
ಗುರುರೂಪ ತಾನಾಗಿ ಧರೆಲಿ ಮೆರೆವನಾ 1
ಗಗನಧುನಿ ಧರಿಸಿದನಾ | ಬೆಟ್ಟ |
ಮಗಳಿಗೆ ಅರ್ಧಾಂಗಿ ನೀಡಿಹನಾ ||
ನಿಗಮಾಗ ಮಂಗಳಯುಗತಿಗೆ | ನಿಲುಕದು |
ನಿಲುಕದುರಗ ಭೂಷಣ ಭಸ್ಮಾಂಗ ವಿಗಢ ನಾಟಕನಾ 2
ಘನಸಾರ ಗೌರಾಂಗ ಹರನಾ | ತಪ್ತ |
ಕನಕ ವರ್ಣ ಜಟಾಧರನಾ ||
ಮುನಿಜನ ಶುಭತದವನ ಚೌರ್ಚಿತ | ಪದ ||
ಅನುದಿನ ಮಹಿಪತಿ ಜನ ಸಲಹುವನಾ3