ಕೈಹಿಡಿದೆನ್ನನು ನಡೆಸೋ ರಂಗ
ಚೋಹವ ಬಿಡಿಸಿ ನಿನ್ನಡಿಗಳ ಹಿಡಿಸೊ ಪ
ಮೋಹ ಮಾತ್ಸರ್ಯದ ದಾಹವ ಬಿಡಿಸೋ
ಶ್ರೀಹರಿ ನಿನ್ನ ನಾಮಂಗಳ ನುಡಿಸೋ ಅ.ಪ
ಇಂದಿರೆಯರಸ ಮುಕುಂದ ನಿನ್ನ | ಕಂದನ ಮರೆವರೆ
ತಂದೆ ಗೋವಿಂದಾ | ಮಂದಮತಿಯು ನಾನೆ ಗೋಪೀ
ಕಂದ | ಮಂದರಧರ ಕಾಯೋ ನಿತ್ಯಾನಂದ1
ಮಂಗಳಕರ ಶುಭನಾಮ | ಹಿಂಗದೆ ಭಜಿಪೆನು ಅರಿಕುಲಭೀಮ
ಭಂಗಿಸು ದುರಿತವ ಮಾಂಗಿರಿಧಾಮ 2
ದಾಸರದಾಸ ನಾನೆಂಬುದನುಳಿಸೋ
ವಾಸುದೇವ ನಿನ್ನ ಬೇಡುವುದೆನಿಸೊ3