ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಟಕಟಾ ಕಂಡೆವಲ್ಲಾ ಕುಟಿಲವರ್ತನ ಕೆಲಕೆಲವು ಈ ಕಲಿಯುಗದೀ ಪ ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ ಹುಲಿಸಿಲ್ಲ ಹುಲಿಸಾದರಿಲ್ಲಾ ಪ್ರಜೆಗೇ ಸಲುವಕೋರಲ್ಪವನು ಬಿಡರು ರಾಜರುಗಳ ಹಾ ವಳಿಯಲುಳುಹಿಲ್ಲ ಇನ್ನೆಂತು ಕೃಷಿಕರಿಗೇ 1 ಧನವಗಳಿಸಿಯೆ ಪಡುವುದನ್ಯಾಯವೇ ಮೊದಲು ಮನವರಿತು ಪಾತಕಂಗಳ ಮಾಡುತಿಹರೂ ಇನಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು ಜನಪರೊಡೆಯರು ಬಯಲಮಮತೆಗಳ ಬಿಡರೂ 2 ಕಕ್ಕುಲತೆ ಪರನಿಂದೆ ರಾ ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ ಕುಹಕ ಕುಟಿಲ ಕುಮದ ಸ್ವಾಮಿದ್ರೋಹ ವಸುಮತಿಯ ಸುರರ ವಧೆ ಘನವಾಯಿತಲ್ಲಾ 3 ತೊಡುವೊಡವೆಗಳ ಬೇಡಲೊಡನೆರಡು ಕಂಗಳಲಿ ಕಿಡಿಸೂಸಿ ಬಾಯಿ ನೊರೆಸುತ್ತಿ ಘರ್ಜಿಸುತಾ ಜಡಿವ ಕೋಪದಿ ಮಧುಪರಂತೆ ಜರೆವೀ ಬಾಯಿ ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ 4 ರಸನಬಿಡುವರು ಕಸವಪಿಡಿವರೊರೆಯನು ಪಿಡಿದು ಬಿಸುಡುವರಲಗ ಪರುಸವನು ಬಿಟ್ಟು ಕಲ್ಲಾ ಒಸೆದು ಬಿಡುವರು ಶ್ರೀ ವೈಕುಂಠಕೇಶವನಿರಲು ನುಸಿ ದೈವಗಳ ಭಜಿಸಿ ಹಸಗೆಡುತಲಿಹರೂ 5
--------------
ಬೇಲೂರು ವೈಕುಂಠದಾಸರು
ನಾದನಾದ ಸುನಾದವ ತಿಳಿದವ ನಾದ ಮೂರುತಿ ನಿಜನಾದ ಪ ಆರು ಅರಿಗಳು ಅವರನು ಗೆಲುವೊಡೆ ಆಶ್ರಯ ತಾನಿದೆ ನಾದಧೀರತನದಲಿಹ ನಾಲ್ವರ ಸಾಧಿಸೆ ದಿಟವು ತಾನಿದೆ ನಾದ 1 ಅಷ್ಟಮದಂಗಳನೆಲ್ಲವ ತಿಳಿವೊಡೆ ಆದಿಯಹುದು ಈ ನಾದದುಷ್ಟರು ಐವರ ದೃಢವನು ಕೆಡಿಸಲು ದೃಷ್ಟಿಗೆ ತಾನಿದೆ ನಾದ 2 ಮೂರು ಮೂರು ಮೂರೆನಿಸುವ ತ್ರಿಪುಟಿಯ ಮೂಲನಾಶವಿದೆ ನಾದಚೋರರು ಸಪ್ತಾ ಸಪ್ತರು ಎಂಬರ ಭೇದಿಸೆ ತಾನಿದೆ ನಾದ3 ಎರಡರ ಭೇದವನೆಲ್ಲವನಳಿವೊಡೆ ಎಡೆದೆರಪಿಲ್ಲದ ನಾದಭರಿತವನಂದಾನಂದವ ತುಳುಕುವ ಭಾಗ್ಯವು ತಾನಿದೆ ನಾದ 4 ನಾದದಿ ನಿತ್ಯವು ಬೆರೆತಿಹ ಪುರುಷನೆ ನಾದ ಚತುರ್ಮಖನಾದವಾದರಹಿತ ಚಿದಾನಂದ ಗುರುವಿನ ಪಾದದೊಳಗೆ ಅವನಾದ 5
--------------
ಚಿದಾನಂದ ಅವಧೂತರು
ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ತೊಳಲುವೆ ದಾರಿಯ ಕಾಣದೆ ಅ.ಪ. ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು ಲಮ್ಮಗೊಡವುಹರಿ 1 ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು ಸಾರಿ ಬಾಯಾರಿಸುತಿರ್ಪವು 2 ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ಪೋಲುತ ನಮ್ಮನು ಬಾಧಿಸುತಿರುವರು3 ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು? ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ ಜರೆಯೆಂಬುದ್ರಿಕ್ತಾಂಗನೆ4 ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ ವರದ ವಿಠಲನಿಜ ಚರಣವೆ ನಂಬಿದೆ 5
--------------
ಸರಗೂರು ವೆಂಕಟವರದಾರ್ಯರು
ಪಾಲಿಸೆನ್ನ ಶ್ರೀಲೋಲ ಕೃಪಾಳು ಪ ಬಾಲಕನುಕ್ತಿಯ ಲಾಲಿಸಿ ಕೇಳೀ ಅ.ಪ ಕಾರಾಗಾರ ಶರೀರದಾಯಗಳ ದಾರಾ[ಧಿ]ಪತ್ಯದ ದಾರಿಯನಿ[ತು]ಗಳ1 ಆರುಮಂದಿ ಬಲುಶೂರರು ಖಳರು ಚೋರರು ಚಿತ್ತವ ಹಾರಿಸುತಿಹರು 2 ತನುಸಂಬಂಧದ ಜನರರ್ಥಿಯಲಿ ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ ಈ ಪರಿಮೋಚನ ಶ್ರೀಪತಿ ಹೇಗೆ 4 ಕರುಣದಿ ಶ್ರೀಪುಲಗಿರಿಯೊಳಿರುವನೆ ಶರಣರಪೊರೆಯುವ ವರದ ವಿಠಲನೆ 5
--------------
ವೆಂಕಟವರದಾರ್ಯರು
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬಾರೋ ಬಾರೋ ಶ್ರೀಗುರುರಾಯ ಬಾರೋ ಬಾರೋ ಭೂಸುರವರ್ಯ ಬಾರೋ ಬಾರೋ ಭಕ್ತಪ್ರೀಯ ಕಾಯ ಪ ಘೋರಾರಣ್ಯದೊಳು ಬಂದು ಸೇರಿದೆನೊ ದುಷ್ಕರ್ಮದಿ] ಕ್ರೂರ ಮೃಗಗಳೆನ್ನತಿ ಬಾಧಿಸುತಿಹವು ಚೋರರುಪದ್ರವವನ್ನು ನಾ ಸಹಿಸಲಾರೆ ಇಷ್ಟೆನುತ ದೂರ ನೋಳ್ವರೆ ವ್ಯಾಳ್ಯಕೆ ಸೂರಿವರೇಣ್ಯ 1 ಮಂದಜನ ಸಂಗದಿಂದ ತಂದೆ ತ್ವತ್ಪಾದಾರ ವಿಂದ ಪೊಂದದಿರೆ ಸಂಧಿಸಿಎನ್ನಗೆ ಬಂದÀ ಬನ್ನ ಹಿಂದೆ ನೀ ನಾಲ್ವರಿಯಲಿಲ್ಲೆ ಸಂದೇಹವ್ಯಾಕೆ 2 ಇಂದ್ರ ಸಮವಿರಾಜಿತ ಇಂದ್ರ ವಿರೋಧಿ ಸಂಭೂತ ಇಂದ್ರ ದೇವಾಧಿ ಮಾನಿತ ಆನಂದ ಪ್ರದಾತ ಇಂದ್ರ ಜಾರಿ ಸೂತ ಶಾಮಸುಂದರವಿಠಲ ದೂತ ಇಂದ್ರ ಜಾತಾಖ್ಯರ ಪ್ರೀತ ಇಂದ್ರಾರ್ಯಪೋತ 3
--------------
ಶಾಮಸುಂದರ ವಿಠಲ
ಶ್ರೀ ವ್ಯಾಸರಾಯರು ಚಂದ್ರಾ ಧರೆಯೊಳು ಮೂಡಿದಾ ಪ್ರಹ್ಲಾದನೆಂಬ ಚಂದ್ರಾ ಪ ಹೊಂದಿದವರ ಹೃದಯಾಂಧಕಾರನೀಗುವ ಗುಣ- ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ. ವಿಕಸಿತಸತ್ಕುಮುದಕೆ ಬಂಧೂ ಖಳ ಮುಖಾರವಿಂದವಳಿದು ಕೊಂದೂ ಸುಖದಿ ಕುಳಿವ ಬುಧಚಕೋರ ತತ್ವ ಪ್ರಕಾಶಕರ ಚಂದ್ರಿಕಾಪೂರ್ಣನೆಂಬ 1 ಹೇಯಮತಗಳೆಲ್ಲವ ಮುರಿದೂ ಬಲು ಬಾಯಿಬಾರದೆ ನಿಲ್ಲಲು ಜರಿದೂ ಮಾಯಿಚೋರರು ಪಲಾಯನಗೈಯಲು ವೃಷ್ಟಿ ಕರೆಸಿದಾ 2 ಕಂಡೂ ಗೋಪಾಲಕೃಷ್ಣನ ಪದವ ಕದ- ರುಂಡಲಿಗೀಶ ಭಕ್ತನಾಮೋದವ ಕೊಂಡು ಭೂಮಂಡಲವ ಪಂಡಿತ ಜನಮನ ತಾಂಡವವಾಡಿದ ತರ್ಕತಾಂಡವ ಮಾಡಿದ 3
--------------
ಕದರುಂಡಲಗೀಶರು
ಬಂದರದಕೊ ಬಲರಾಮ ಮುಕುಂದರುಬಂದರಕೊಭಾವೆಕೆಲೆಯುತ ನಲಿಯುತಪ.ನೀರಜಸಖನುದಯಾಗದ ಮುನ್ನ ಝೇಂಕಾರದೊಳಳಿ ಮೊತ್ತವೇಳದ ಮುನ್ನಸಾರಸಕೀರಮಯೂರಸ್ವನದ ಮುನ್ನನಾರಿಯರು ಮೊಸರ ಮಥಿಸುವುದರಿತು 1ನವ ನವನೀತಕೆ ಮಚ್ಚಿ ಮನವಿಟ್ಟುತವಕದಿ ಗೋಡೆಯ ಧುಮುಕುತಲಿಯುವತಿ ಗೊಲ್ಲತಿಯರ ಮರುಳು ಮಾಡುವರು ಸಣ್ಣವರೊಳು ತಾಳ ಮೇಳದ ಅಬ್ಬರದಲಿ 2ಸಾರಗೋರಸ ಚೋರರು ಗೋಪಿಮಕ್ಕಳುಸೂರಿಡುವರು ಮನೆ ಮೀಸಲನುಸಾರಿಸಾರಿಗೆ ಪ್ರಸನ್ವೆಂಕಟ ಕೃಷ್ಣರಚಾರುಒಡ್ಯಾಣಘಂಟಾರವವನಾಲಿಸವ್ವ3
--------------
ಪ್ರಸನ್ನವೆಂಕಟದಾಸರು
ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
--------------
ಪ್ರಸನ್ನವೆಂಕಟದಾಸರು