ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರಳುತನವು ಬಂದು ಎನ್ನ ಕೊರಳ ಕೊಯ್ವುದು ದುರುಳನಾಗಿ ಇರುಳು ಹಗಲು ಒರಲುತಿಪ್ಪುದು ಪ ಮಾರಿಯನ್ನು ಮನೆಗೆ ತಂದು ತೋರಿಯಿಡುವುದು ಚೋರರನ್ನು ತಂದು ತನಗೆ ಸೇರಿ ಕೊಡುವುದು ದೂರುಬಪ್ಪ ದಾರಿಯನ್ನು ಸೇರಿ ನಡೆವುದು ಸಾರಿ ಪರನಾರಿಯನ್ನು ಸೂರೆಗೊಂಬುದು 1 ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು ಕಂಡು ಕಂಡು ಹರುಷ ತಾಳಿ ಕೊಂಡುಯಿರುವುದು ಭಂಡತನದಿ ಕೊಂದು ದೂರ ಕೊಂಡು ಪೋಪುದು ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು 2 ಸೂಳೆಯನ್ನು ಕಂಡು ಹರುಷ ತಾಳಿಯಿರುವುದು ವೇಳೆಗವಳು ಬಾರದಿರಲು ಚೀ[ರಿ]1ಯಳುವುದು ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು ಖೂಳರನ್ನು ಕರೆದು ಅನ್ನ ಪಾಲನೆರೆವುದು 3 ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು ಚಳಿಯು ಹೋಯಿತೆಂದು ಮನದಿ ನಲಿವುತಿರುವುದು ಬಿಳಿದು ಬೂದಿಯನ್ನು ಕೊಂಡು ಹೊಳೆಗೆ ಬಿಡುವುದು ಸ್ಥಳವ ಕೆಡಿಸಿ ಕುಲವನೆಲ್ಲ ಬಳಕೆ ತೀರ್ಪುದು 4 ಹೆತ್ತ ಮಗನ ತೊರೆದು ತಾನು ದತ್ತ ತಪ್ಪುದು ಸತ್ತ ಎಮ್ಮೆ ಹಾಲು ಹತ್ತು ಸೇರಿಗಳವುದು ಕತ್ತಿಯನ್ನು ಬಿಸುಟು ಒರೆಯ ಹತ್ತಿರಿಡುವುದು ಶತ್ರುವಾಗ ಬಂದ ತನ್ನ ಒತ್ತಿ ನಿಲುವುದು 5 ಗಾಳವಿಲ್ಲದೆ ಮೀನುಗಳ ಮೇಲೆ ತೆಗೆವುದು ಕೋಲುಯಿಲ್ಲದ ಕೊಲೆಗಳೆನ್ನ ಮೇಲೆ ಬೀಳ್ವುದು ಸಾಲವನ್ನು ಕೊಟ್ಟವರು ಸಾಯಲೆಂಬುದು ಕಾಲನೊಳು ಕೈಯ ಕಟ್ಟಿ ಶೂಲೆ ತಪ್ಪುದು 6 ಸರ್ವತಂತ್ರವೆಲ್ಲ ಹರಿಯ ಹತ್ತಿರಿಡುವುದು ಗರ್ವವನ್ನು ತೋರಲವನ ಸುತ್ತಿ ಬರುವುದು ಇರುವೆಯಂತೆ ಮೈಯನೆಲ್ಲ ಕುತ್ತಿ ತರಿವುದು ತೋರ ವರಾಹತಿಮ್ಮಪ್ಪನ ಎತ್ತಿ ನೆನೆವುದು 7
--------------
ವರಹತಿಮ್ಮಪ್ಪ
ಲಕ್ಷ್ಮೀನಾರಾಯಣ ಕಾಯೋ ನಿನ್ನ ನಂಬಿದವರÀುಕ್ಷಿಯೊಳು ಜಗಂಗಳನಿತ್ತು ರಕ್ಷಿಸಿದ ಶ್ರೀಶ ಪ. ಕಂದ ಪ್ರಹ್ಲಾದನ್ನ ಕಾಯ್ದೆ ಚಂದದಿ ಕಾಯೊಯೆಂದು ಬಂದಮುಂದೆ ನಿಂದ ಮಂದಿಯೊಳು ನಿಂದು ನೀ ಸಲಹಯ್ಯ 1 ಕರಿರಾಜ ಕರೆಯಲು ಭರದಿ ಬಂದು ಪೊರೆದೆ ನೀಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ 2 ಶರಣು ಮುಖ್ಯ ಸುರರ ವರದೈವವಾದೆ ನೀನುಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ 3 ಮೀನಾಂಕ ತಲೆದೊರಿದೆ ನೀ 4 ಹಯವದನನಾಗಿ ನೀ ತ್ರಯೀಚೋರರನ್ನು ಕೊಂದುಸ್ತ್ರೀಯರಿಗೆ ನ್ಯಾಯದಿಂದ ದಯ ಬೀರಿದೆಯಲ್ಲ 5
--------------
ವಾದಿರಾಜ