ನಿಜದಿ ಸುಖಪದ ಕೊಡುವೆಯೋ
ಭಜಕರಿಗೆ ಶುಭದಾಯಿಯೋ ಪ
ತ್ರಿಜನ ಪೂಜೆಯಗೊಂಬೆಯೋ ಅಂ-
ಗಜಜನಕ ಗೋಕಾಯ್ದೆಯೋ ಅ.ಪ
ಸುತನಕೊಂದೇ ಸತಿಯ ತೊರೆದೇ
ಅತಿಯ ದುಃಖವ ನಟಿಸಿದೇ
ಸತತ ಸರ್ವವ್ಯಾಪಿಯೆಂಬರು
ಹಿತನೆ ಕಾಣಿಸೆಯೆಲ್ಲಿಹೇ 1
ನಾರಿಯರ ಸೆರೆ ನೀಗಿಸೀ ಹದಿ
ನಾರು ಸಾವಿರ ಸೇರ್ದೆಯೋ
ಚೋರನೆನ್ನಿಸಿ ಸೀರೆಕದ್ದು
ಮಾರಕನೆ ತಾಮಮೃತನೇ 2
ಕೂರ್ಮ ವರಾಹನೇ ನರ
ಕೇಸರೀ ವಾಮನನು ನೀ
ಹಸ್ತಪರಶು ಶ್ರೀ ರಾಮಕೃಷ್ಣನೆ
ವಿಶ್ವ ಬುದ್ಧನೆ ಕಲ್ಕಿಯೇ 3
ಘೋರ ದೈತ್ಯ ವಿದಾರಿಯೋ ಹರಿ
ಸಾರಿ ಹಲವವತಾರದಿಂ
ತೋರಿದವ ನೀನಾದರೂ ಜಾ
ಮಾಧವ ನಂಬಿದೇ 4