ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲಗೋಪಾಲನ ತೋರೆಲೆ ಲಲನೆ ಲೀಲೆಗಳಲ್ಲಿ ಮುದದಿಂದ ಪ ಕಾಲ ಕಳೆಯುತಿರೆ ಬಾಲೆಯರು ಕೇಳೆ ಪೇಳದೆ ಅಗಲಿದನೆಮ್ಮ ಬಲು ಲೋಲನಾಗಿಹನಿವನಮ್ಮ ಎಮ್ಮ ಮೇಲೆ ಅತಿ ಕಠಿಣನಮ್ಮ ಮೋರೆ ಕೀಳು ಮಾಡುವನಿವನಮ್ಮ ಕೋಪ ಜ್ವಾಲೆಯಿಂದುರಿಯುವನಮ್ಮ ಬಲು ಬಾಲನಾಗಿಹನಿವನಮ್ಮ ಗುಣ ಶಾಲಿ ಮಾತೆಯ ಕೊಂದನಮ್ಮ ಕಪಿ ಜಾಲದೊಳತಿ ಪ್ರಿಯನಮ್ಮ ಪರ ಬಾಲೆಯೊಳತಿ ಮೋಹವಮ್ಮ ಮಾಯಾ ಜಾಲವ ಬೀಸುವನಮ್ಮ ಬಲು ಕೀಳನು ಮೇಲು ಮಾಡುವನು ಇಂಥಾ 1 ಸಾರಸಾಕ್ಷನ ವಿರಹವನು ಸೈರಿಸಲಾರೆವೆ ಕರುಣದಲಿ ತೋರೆ ಕೋರುವೆವು ವಿನಯದಲಿ ಅವ ನೀರೊಳಗಡಗಿದನೇನೆ ದೊಡ್ಡ ಮೇರು ಬುಡದಲಿಹನೇನೆ ಅವ ಚಾರು ಸೂಕರನಾಗಿಹನೇನೆ ಅವ ಬಾರಿ ಕಂಭದಲಿಹನೇನೆ ವೇಷ ಧಾರಿ ಬ್ರಹ್ಮಚಾರಿಯೇನೆ ಕ್ಷಿತಿ ಪಾರಿಯೆನಿಸಿ ತಿರುಗುವನೆ ಅವ ಸೇರಿಹನೆ ಹನುಮನನು ಅಯ್ಯೋ ಜಾರ ಚೋರನಿವನಮ್ಮ ಮಾನ ಮೀರಿ ಬತ್ತಲೆ ನಿಂತಿಹನೇ ವಾಜಿ ಏರುತ ಓಡುತಲಿಹನೇ ಇಂಥಾ 2 ವೇಣು ವಿನೋದದಿ ಕುಣಿಯುತಲಿ ಕಾಣುವುದೆಂತು ಪ್ರಸನ್ನ ಮಾಧವನ ಮೀನ ರೂಪವ ತಾಳಿದನ ಬಲು ಪೀನ ಶರೀರ ಕಂಠನ ಧರೆ ಯಾನನದಲ್ಲಿ ಪೊತ್ತಿಹನ ದುಷ್ಟ ದಾನವನನು ಸೀಳಿದವನ ಭೂಮಿ ದಾನವ ಯಾಚಿಸಿದವನ ಭೃಗು ಮುನಿಯೊಳವತರಿಸಿದನ ಕಡು ಕಾನನದೊಳು ತಿರುಗಿದನ ಸವಿ ವೇಣು ಗಾನವ ಮಾಡಿದನ ಬಹು ಮಾನಿನಿ ವ್ರತಗಳನಳಿದವನ ಪ್ರಸ ನ್ನಾನನ ತುರಗವಾಹನನ 3
--------------
ವಿದ್ಯಾಪ್ರಸನ್ನತೀರ್ಥರು
ವೇಣು ಗೋಪಾಲನು ಬರುವನಂತೆ ಪ ಜಾಣೆ ನಮ್ಮನೆಯಲಿ ಇರುವನಂತೆ ಅ.ಪ ಪರಮ ಸುಂದರ ನವತರುಣನಿವ ಸಖಿ ಅರಿತು ಭಜಿಪರಿಗೆ ಕರುಣಿ ಇವ ಸಖಿ ತೊರೆಯಬೇಕಭಿಮಾನ ಕ್ಷಣದಲಿ ಮರೆಯಬೇಕಿಹಲೋಕ ಬಂಧನ1 ಹೃದಯವ ಕದಿಯುವ ಚೋರನಿವ ಸಖಿ ಮದನನ ಜಗಕಿತ್ತ ಜಾರನಿವ ಸಖೀ ಕದನದಲಿ ಕಂಠೀರವನು ಶುಭ ವದನೆಯರ ಶೃಂಗಾರ ಜಲನಿಧಿ 2 ಘನತೆಯು ರುಚಿಸದು ಹುಡುಗನಿವ ಧನವನು ಬಯಸನು ಸಿರಿರಮಣ ತನುಮನಗಳರ್ಪಿಸಲು ಹರುಷದಿ ಕುಣಿಯುವನು ಕುಣಿಸುವ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |ಅಂಬುಜನಾಭ ದಯದಿಂದೆನ್ನ ಮನೆಗೆ ಪಜಲಚರಜಲವಾಸ ಧರಣೀಧರ ಮೃಗರೂಪ |ನೆಲನಳೆದೀರಡಿ ಮಾಡಿ ಬಂದ ||ಕುಲನಾಶಿ ವನವಾಸಿ ನವನೀತಚೋರನಿವ |ಲಲನೆಯರ ವ್ರತಭಂಗ ವಾಹನತುರಂಗ 1ಕಣ್ಣ ಬಿಡುವನು ಮುಖ ತಗ್ಗಿಸಿ ನೆಲವಗಿದು |ಅಣಕಿಸುವ ಬಾಯ್ದೆರೆದು ಬಾಲತನದಿ ||ಪ್ರಾಣಘಾತಕನುಣಲೊಲ್ಲ ಬೆಣ್ಣಿಯ ಮೆಲುವ |ಮಾನವ ಬಿಟ್ಟು ಕುದುರೆಯನೇರಿ ಮೆರೆವ2ನೀರ ಪೊಕ್ಕನು ಗಿರಿಯ ನೆಗಹಿ ಧಾರಿಣಿ ತಂದ |ನರಮೃಗ ಬಲಿಬಂಧ ಕೊರಳಗೊಯ್ಕ ||ಶರಮುರಿದೊರಳೆಳೆದು ಬತ್ತಲೆ ಹಯವನೇರಿ |ಪುರಂದರವಿಠಲ ನಮ್ಮ ಮನೆಗೆ ಹರುಷದಲಿ 3
--------------
ಪುರಂದರದಾಸರು
ತ್ರಿಜಗದ್ವಾ ್ಯಪಕಹರಿಎನುವರು ಸುಜನರುನಿಜದಲಿ ಪೇಳಿವದಾರಕ್ಕಾಅಜಭವಾದಿಗಳಿಗರಸನಾದಹದಿನಾಲ್ಕು ಲೋಕಕೆ ದೊರೆ ತಂಗಿ 1ನೀರೊಳು ಮುಳುಗುತ ಮೀನರೂಪದಿಸಾರುವ ಮಯ್ಯವದಾರಕ್ಕನೀರೊಳು ಮುಳುಗಿ ವೇದವ ತಂದು ಸುತಗಿತ್ತಧೀರ ಮತ್ಸ್ಯಮೂರುತಿ ತಂಗಿ 2ಭಾರಬೆನ್ನಿಲಿ ಪೊತ್ತು ಮೋರೆ ಕೆಳಗೆ ಮಾಡಿನೀರೊಳು ವಾಸಿಪದಾರಕ್ಕವಾರಿಧಿಮಥಿಸಿದಮೃತ ಸುರರಿಗೆ ಇತ್ತಧೀರಕೂರ್ಮಮೂರುತಿ ತಂಗಿ3ಕೋರೆದಾಡಿಯಲಿ ಧಾರುಣಿ ನೆಗಹಿದಫೋರನೆನುವರಿವದಾರಕ್ಕಕ್ರೂರ ಹಿರಣ್ಯಾಕ್ಷನ ಕೊಂದು ಭೂಮಿಯ ತಂದಶೂರ ವರಹ ಮೂರುತಿ ತಂಗಿ 4ಕ್ರೂರರೂಪತಾಳುತ ಕರುಳ್ವನಮಾಲೆ ಹಾಕಿದವದಾರಕ್ಕಪೋರನ ಸಲಹಲು ಕಂಬದಿಂದುಸಿದನಾರಸಿಂಹ ಮೂರುತಿ ತಂಗಿ 5ಮೂರಡಿ ಭೂಮಿಯ ದಾನವ ಬೇಡಿದಹಾರ್ವನೆನುವನಿವದಾರಕ್ಕಧೀರ ಬಲಿಯ ಭಕ್ತಿಗೆ ಮೆಚ್ಚಿ ಬಾಗಿಲು ಕಾಯ್ದವಾಮನ ಮೂರುತಿ ಇವ ತಂಗಿ 6ಮೂರು ಏಳುಬಾರಿಧಾರುಣಿ ಚರಿಸಿದಶೂರನೆನುವರಿವದಾರಕ್ಕವೀರ ಕ್ಷತ್ರಿಯರ ಮದವನಡಗಿಸಿದ ಪರಶು-ರಾಮ ಮೂರುತಿ ತಂಗಿ 7ಕೋತಿಗಳೊಡನಾಡಿ ಸೇತುವೆ ಕಟ್ಟಿದ ಪ್ರ-ಖ್ಯಾತನೆನುವರಿವದಾರಕ್ಕಮಾತರಿಶ್ವನಿಗೆ ಒಲಿದಂಥ ದಶರಥರಾಮ ಚಂದ್ರ ಮೂರುತಿ ತಂಗಿ 8ಗೋಕುಲದೊಳು ಪಾಲ್ಬೆಣ್ಣೆ ಮೊಸರುನವನೀತಚೋರನಿವದಾರಕ್ಕಲೋಕಗಳೆಲ್ಲಾ ತಾಯಿಗೆ ಬಾಯೊಳುತೋರ್ದಗೋಪಾಲಕೃಷ್ಣ ಮೂರುತಿ ತಂಗಿ 9ತ್ರಿಪುರರ ಸತಿಯರ ವ್ರತಗಳನಳಿದನುಗುಪಿತನೆನುವರಿವದಾರಕ್ಕಕಪಟನಾಟಕ ಸೂತ್ರಧಾರಿ ಶ್ರೀ-ಹರಿಬೌದ್ಧ ಮೂರುತಿ ತಂಗಿ10ಅಶ್ವುವನೇರುತ ಹಸ್ತದಿ ಖಡ್ಗ ಪುರು-ಷೋತ್ತಮನೆನುವರಿವದಾರಕ್ಕಸ್ವಸ್ತದಿ ಕಲಿಯೊಳು ಸುಜನರ ಪಾಲಿಪಕರ್ತೃ ಕಲ್ಕಿ ಮೂರುತಿ ತಂಗಿ 11ಶಂಖು ಚಕ್ರ ಗದೆ ಪದುಮವು ಸಿರದಿ ಕಿ-ರೀಟಧಾರಿ ಇವದಾರಕ್ಕಪಂಕಜಾಕ್ಷಿ ಪದ್ಮಾವತಿಪತಿಶ್ರೀ-ವೆಂಕಟೇಶ ಮೂರುತಿ ತಂಗಿ 12ಮಮತೆಲಿ ಸುಜನರ ಶ್ರಮ ಪರಿಹರಿಸುವಕಮಲಾಪತಿ ಇವದಾರಕ್ಕಕಮಲಪತ್ರಾಕ್ಷ ಶ್ರೀ ಕಮಲನಾಭ ವಿ-ಠ್ಠಲ ಮೂರುತಿ ಕೇಳಿವ ತಂಗಿ 13
--------------
ನಿಡಗುರುಕಿ ಜೀವೂಬಾಯಿ