ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವತಾರ ಸಿರಿವರ ಘನ ಕರುಣಾಕರ ಪೊರೆಯೈ ಪ. ನಿಗಮಚೋರನನ್ನು ಕೊಂದು ನಗವಪೊತ್ತನೆ ವಿಗಡದೈತ್ಯನನ್ನ ಸೀಳಿ ಜಗವನಾಂತನೇ 1 ಘುಡುಘುಡಿಸಿ ಕಂಬವನು ಒಡೆದುಬಂದನೆ ಪಿಡಿದು ಖಳನ ಕರುಳಬಗೆದು ಕೊರಳೊಳಾಂತನೆ2 ಇಂದ್ರಗನುಜನಾಗಿ ದಾನವೇಂದ್ರ ಗೊಲಿದು ನೀಂ ನಿಂದು ಬಾಗಿಲಕಾವ ಗೊಲ್ಲನಂದಮೇನಿದೈ 3 ಹಡೆದತಾಯ ಶಿರವಪಿಡಿದು ಕಡೆದ ಭಾರ್ಗವ ಮಡದಿಚೋರನನ್ನು ಕೊಂದ ಒಡೆಯ ರಾಘವ 4 ಮಾವ ಕಂಸನ ಕೊಂದ ವಸುದೇವನಂದನ ಮಾಧವ 5 ಮತ್ತೆ ತ್ರಿಪುರ ಸತಿಯರ ಚಿತ್ತಕಲಕಿದ ಉತ್ತಮಾಶ್ವವನ್ನೆ ಹತ್ತಿ ಕಲ್ಕಿಯೆನಿಸಿದ 6 ಉರಗಶಯನ ಗರುಡಗಮನ ಪರಮಪಾವನ ವರದ ಶೇಷಶಿಖರಧಾಮ ಶ್ರೀನಿಕೇತನ 7
--------------
ನಂಜನಗೂಡು ತಿರುಮಲಾಂಬಾ
ವೀರಮಂಡಿ ಹೂಡಿರುವುದು | ಕಾರಣೇನು ವೀರ ಹನುಮ ಪೇಳು ನೀನಿದ ಪ. ರಾಮ ಹೆಗಲ ಏರಲೆನ್ನುತಾ | ಕುಳಿತಿಯೇನೊ ನೇಮದಿಂದ ದಾಸನಾಗುತ ಕಾಮಿನಿಯ ಚೋರನನ್ನು ಧೂಮಕೆಡಹಲೆಂದು ರಾಮ ಆ ಮಹಾರಣರಂಗದಲ್ಲಿ ಸ್ವಾಮಿಗೆ ಜಯವಿತ್ತು ಮೆರೆದೆ 1 ದ್ರೌಪದಿಯ ಮುಡಿಯನೆಳೆದನ | ಎದೆಯ ಮೇಲೆ ಕೋಪದಿಂದ ಕುಳಿತು ಕರುಳಿನ ಪಾಪಿ ಉರವ ಬಗೆದು ಘೋರ ರೂಪ ತೋರಿ ಶತ್ರುಗಳಿಗೆ ಶ್ರೀಪತಿಗೆ ಅರ್ಪಿಸಿದ್ದು ಈ ಪರಿಯೆ ಪೇಳು ಹನುಮ 2 ಅಭಯಹಸ್ತ ತೋರುತಿರುವುದು | ಭಕ್ತರಿಗೆ ಉಭಯ ತತ್ವಜ್ಞಾನ ಕೊಡುವುದು ಇಭವರದ ಗೋಪಾಲ ಕೃ- ಷ್ಣವಿಠಲನಂಘ್ರಿ ಕಮಲ ದೃಢದ ಬುದ್ಧಿ ಕೊಡುವ ತೆರವೊ 3
--------------
ಅಂಬಾಬಾಯಿ