ಬಲ್ಲವನಿವನು ಚಿಕ್ಕವನಲ್ಲವೆ ಬಾಲಕನು
ಇಲ್ಲದ ನುಡಿಗಳ ಎನ್ನೊಡನುಸುರಲು
ಇಲ್ಲಿಗೆ ಬಂದಿರೆ ಗೋಪಿಯರÉಲ್ಲರು ಪ
ಮಣಿಮಯದೊಡಿಗೆಯನು ತೆಗೆತೆಗೆದ್ಹಣಿವನೆ ಬಲ್ಲವನು
ಉಣಲೊಲ್ಲ ಉಡಲೊಲ್ಲ ಚಲಗೊಂಡಳುವ
ಜಾರ ಚೋರನಂಬರೇ 1
ಹೆಣ್ಣಿಗೆ ಮರುಳಾಗುವ ಪ್ರಾಯವೆ ಕಣ್ಣು ನಿಮಗೆ ಕಾಣವೆ
ಸಣ್ಣವನಿವಗೆ ನಿಲುಕದ ನೆಲುವಿನ ಪಾ
ಲ್ಬೆಣ್ಣೆಯ ಮೆದ್ದೋಡಿ ಬಂದನೆಂದೆಂಬರೆ 2
ಅಂಬರದೊಳು ಮೂಡಿದ ಚಂದ್ರಬಿಂಬವ ತಾರೆನುತ
ಕುಂಬಿನಿಯೊಳು ಬಿದ್ದು ಹೊರಳುವ ತರಳ ಹಿಡಿಂಬೆಯ
ರಮಣ ಕೋಣೆಯ ಲಕ್ಷ್ಮೀರಮಣನು 3