ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಂತರ್ಯಾಮಿ ಸರ್ವೇಶ ಬಾರೊ ಸರ್ವಸ್ವತಂತ್ರನೆ ಸರ್ವಭಯನಾಶ ಪ ಸರ್ವತಂತ್ರನೆ ಸರ್ವವೇದದಿ ಸರ್ವತತ್ತ್ವದಿ ಸರ್ವಸಾಕ್ಷಿ ನೀ ಸರ್ವವ್ಯಾಪಕ ಸರ್ವದೇವರ ಸಾರ್ವಭೌಮ ಅ.ಪ ಜಡಬೊಂಬೆ ನಾಟಕರಚಿಸಿ ಎಡಬಿಡದೆ ಕುಣಿಸ್ಯಾಡುವಿ ಕಡುಮೋಹಗೊಳಿಸಿ ಕಡುಗೌಪ್ಯದದರೊಳು ನೆಲೆಸಿ ನೀನೆ ಅಗಣಿತ ಕಲ್ಪನೆವೆರಸಿ ಜಡಕೆ ಜಡವಾದ ತೊಡರಿನಾಟದ ಕೆಡಕು ತಪ್ಪಿಸಿ ಪಿಡಿದು ಎನ್ನನು ಒಡೆಯ ನಿನ್ನಡಿ ಭಕ್ತರಾವಾಸ ದಿಡು ಎಂದೆರಗುವೆ ಪಾಲಿಸಭಯ 1 ನಾನಾವಿಧದ ಸೃಷ್ಟಿಗಳ ಸೃಜಿಸಿ ಪೋಣಿಸಿ ಮಾಡಿಟ್ಟ ಭವವೆಂಬ ಮಾಲೆ ಏಳು ಮೋಹವ ತುಂಬಿದೆಲ ಪುಸಿ ಕಾಣದಂತೊಗೆದಿ ಮಹಾಮಾಯದ ಜಾಲ ನಾನು ನೀನೆಂಬ ಜಾಣರೆಲ್ಲ ಬಿದ್ದು ಏನುಕಾಣದೆ ತ್ರಾಣಗೆಟ್ಟರು ಹೀನಮತಿ ನಾನೇನು ಬಲ್ಲೆನು ನೀನೆ ಸಲಹೆನ್ನ ದೀನರಕ್ಷಕ 2 ಪಾವನ ಪರಮಪ್ರಕಾಶ ದೇವ ಭಾವಜನಯ್ಯ ನಿಜಭಾವಿಗಳರಸ ಕೇವಲಸುಗುಣಾಂತರ್ವಾಸ ನಿನ್ನ ಸೇವಕನೆನಿಸೆನ್ನ ಕಾಯೊ ನುತಪೋಷ ಜೀವಜೀವರಜೀವ ಚೈತ್ಯನದೇವ ದೇವರ ದೇವ ನಂಬಿದೆ ಜಾವ ಜಾವಕೆ ಒದಗುತಿಹ್ಯ ಮಹ ನೋವು ಗೆಲಿಸೆನ್ನಯ್ಯ ಶ್ರೀರಾಮ 3
--------------
ರಾಮದಾಸರು