ಮಾತೆ ಸರಸ್ವತಿ ಮಂಜುಳ ಮೂರುತಿ
ಚೇತನಾತ್ಮಕಿ ಭಾರತಿ ಪ.
ಪ್ರೀತಿಯಿಂದೀವುದು ಪೀತಾಂಬರಧರನ
ಸಾತಿಶಯದ ಭಕುತಿ ಅ.ಪ.
ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ
ಕರುಣಿಸೆನಗೆ ಸನ್ಮತಿ
ಪರಮಪಾವನ ವೈಷ್ಣವರ ಪಾದಾಂಬುಜ ಮಧು-
ಕರದಂತಿರಲಿ ಮದ್ರತಿ 1
ಮೂರ್ತಿ ತಾರೇಶನಂದದಿ ಹೃದಯಾ-
ಕಾಶದೊಳು ಕಾಣುತಿ
ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ
ಗೈಸಮ್ಮ ಹರಿಯ ಸ್ತುತಿ 2
ಮನುಜರ ರೂಪದಿ ದನುಜರು ಭೂಮಿಯೊಳ್
ಜನಿಸಿದರ್ಜಲಜನೇತ್ರಿ
ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ
ಜನನಿಯೆ ನೀನೆ ಗತಿ 3
ಭಾರತಿದೇವಿಯ ಸ್ತುತಿ