ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ವಿಠಲನ ನೋಡಿದೆ ಪ ನೋಡಿದೆನು ಕಂಗಳಲಿ ತನುವೀ ಡಾಡಿದೆನು ಚರಣಾಬ್ಜದಲಿ ಕೊಂ ಡಾಡಿದೆನು ವದನದಲಿ ವರಗಳ ಬೇಡಿದೆನು ಮನದಣಿಯ ವಿಠಲನ ಅ.ಪ. ಇಂದಿರಾವಲ್ಲಭನ ತಾವರೆ ಗಂದನಂಜಿಸಿ ತಪತÀಪಾವೆಂ ತೆಂದು ಪೇಳ್ದನ ಯುವತಿ ವೇಷದಿ ಕಂದು ಗೊರಳನ ಸ್ತುತಿಸಿದನ ಪು ರಂದರಾನುಜನಾಗಿ ದಿವಿಯೊಳು ಕುಂದದರ್ಚನೆಗೊಂಬ ಸನಕ ಸ ನಂದನಾದಿ ಮುನೀಂದ್ರ ಹೃದಯ ಸು ಮಂದಿರನ ಮಮ ಕುಲದ ಸ್ವಾಮಿಯ 1 ಭಾರ ತಾಳದೆ ಭೂತರುಣಿ ಗೋರೂಪಳಾಗಿ ಸ ನಾತನನ ತುತಿಸಲ್ಕೆ ಶೇಷ ಫ ಣಾತ ಪತ್ರನು ನಂದಗೋಪ ನಿ ಕೇತನದಲವತರಿಸಿ ವೃಷ ಬಕ ಪೂತನಾದ್ಯರ ಸದೆದು ಬಹುವಿಧ ಚೇತನರಿಗೆ ಗತಿನೀಡಲೋಸುಗ ಜಾತಿಕರ್ಮಗಳೊಹಿಸಿ ಮೆರೆದನ 2 ತನ್ನತಾಯ್ತಂದೆಗಳ ಹೃದಯವೆ ಪನ್ನಗಾರಿಧ್ವಜಗೆ ಸದನವೆಂ ದುನ್ನತ ಭಕುತಿ ಭರದಿ ಅರ್ಚಿಪ ಧನ್ಯಪುರುಷನ ಕಂಡು ನಾರದ ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರ ಪನ್ನ ವತ್ಸಲ ಬಿರಿದು ಮೆರೆಯಲು ಜೊನ್ನೊಡಲು ಭಾಗದಿ ನೆಲೆಸಿದ ಜ ಗನ್ನಾಥ ವಿಠ್ಠಲನ ಮೂರ್ತಿಯ 3
--------------
ಜಗನ್ನಾಥದಾಸರು
ಮರೆತಿರಲಾರೆ ಮನಸಾರೇ ಹರೇ ಪ ಮರೆತಿರಲಾರೆ ನಾ ಮಹಿತಚಾರಿತ್ರನ ಸರಸಿಜಪತ್ರ ನೇತ್ರನ ಅ.ಪ ಬಗೆಬಗೆ ರತಿಯಲಿ ಜಗವನು ಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿ ಘಾತನ ಲಕ್ಷ್ಮೀನಾರಾಯಣನ 2 ದಾಸರ ಹೃದಯನಿವಾಸನ ದೋಷನಿರಾಸನ ಶ್ರೀನಿವಾಸನ 3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಳಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ 5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ 7
--------------
ವೆಂಕಟವರದಾರ್ಯರು
ಮರೆತಿರಲಾರೇ-ಮನಸಾರೇ ಹರೇ ಪ ಸರಸಿಜ ಪತ್ರನೆತ್ರನ ಅ.ಪ. ಬಗೆ ಬಗೆರತಿಯಲ್ಲಿ ಜಗವನ್ನುಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿಘಾತನ ಲಕ್ಷ್ಮೀನಾಥನ 2 ದಾಸರ ಹೃದಯ ನಿವಾಸನ ದೋಷನಿರಾಸನ ಶ್ರೀನಿವಾಸನ3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಲಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮ ಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ7
--------------
ಸರಗೂರು ವೆಂಕಟವರದಾರ್ಯರು