ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಾಮ ಶ್ರೀ ರಘುರಾಮ ನೀಲಮೇಘ- ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ- ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲಿಗಿರಲು ಹರಿನಾಮ ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1 ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ್ವನಜಾಕ್ಷ ರಾಮ ಕ್ರೂರರಾಕ್ಷಸರನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ 2 ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಧಾಮ 3
--------------
ಹರಪನಹಳ್ಳಿಭೀಮವ್ವ