ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲವನಾದರೀ ತಳ್ಳಿಬೇಡ ಅಲ್ಲದ ಪಥವಿದರಾಸೆಯ ಬಿಡು ನೀನು ಪ ಸರ್ಪನ ಪಣೆಯೊಳು ಜೇನುತುಪ್ಪವ ಕಂಡು ಅಪ್ಪನೆ ತಾರೆಂದು ಅಳುತಿರಲು ತುಪ್ಪದ ಸವಿಯನು ಜನರುಂಡು ತೀರಲು ಮುಪ್ಪಾಗಿಯಿರುವುದ ಕಂಡು ಮೂದಲಿಸುವ 1 ನಂಬಿದ ಮನುಜರ ಹಂಬಲ ಮರವದು ಡೊಂಬಿಯವರು ಕಂಡು ತಡೆಯಲಾಗಿ ಅಂಬರವನು ಕಂಡು ನಗುತಿಪ್ಪ ಮನುಜನ 2 ಅಂಬರವಡಗಿಯೆ ಕುಂಭಿನಿ ಜಾರಿಯೆ ನಂಬಿದ ಮನುಜರು ನಡೆವೆಡೆಯ ಕುಂಭದ ನೀರನು ಚೆಲ್ಲುತ್ತ ಮಗುಳಲ್ಲಿ ಕಂಭದ ಹಾಗೆಲ್ಲ ನಿಂತಿಹ ಜನರನು 3 ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ ದುಷ್ಟನೊಬ್ಬನು ಬಂದು ನಿಂತಿಹನು ಇಟ್ಟಿಹ ಬಾಗಿಲ ಕಾಣದೆ ತಾ ಬಂದು ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ 4 ಕಡಹದ ಪಲ್ಲಕ್ಕಿ ಬೆಡಗನ್ನು ಕಾಣುತ್ತ ಮೃಗ ಬಂದು ಕುಳಿತಿರ್ದುದ ಒಡನೆ ಕಟ್ಟಿದ ವಾಹಕರ್ಹದಿನಾರು ಮಂದಿಯು ಕಡಿಮೆಯ ಸಂಬಳ ಕಡವಿಡುವವರನ್ನು 5 ಅಕ್ಕಿಯ ರಾಶಿಯು ತೀರಲು ಕೊಳಗವು ಬೆಕ್ಕನೆ ಬೆರಗಾಗಿ ಕುಳಿತಿಪ್ಪುದು ಬಿಕ್ಕಿದ ಅಕ್ಕಿಯ ಹಕ್ಕಿಯು ಹೆಕ್ಕಿಯೆ ಗಕ್ಕನೆ ಹಾರುವ ಪಕ್ಷಿಯ ನೋಡುತ್ತ 6 ರವಿಶಶಿಯೊಂದಾಗಿ ಇರುತಿಹ ಗಣಿತದಿ ಧರೆಯೊಳು ಸಾವಿರಯೆಲೆ ಬೀಳ್ವುದು ಎರವಿನಾಭರಣವ ಅವರವರೊಯ್ಯಲು ವರಾಹತಿಮ್ಮಪ್ಪನ ಮರೆ ಬೀಳು ಕಂಡ್ಯ 7
--------------
ವರಹತಿಮ್ಮಪ್ಪ
ಯತಿಗಳು ಆನೆ ಬರುತ್ತಿದಿಕೋ ದಾಸರ ಮರಿ-ಯಾನೆ ಬರುತ್ತಿದಿಕೋ ಪ. ಮದವೇರಿ ಹದಮೀರಿ ಮದನಾರಿ ತಾನೆಂಬಅಧಮರೆದೆಯ ಮೆಟ್ಟಿ ಸೀಳಲು ಅ.ಪ. ಮರುತಮತ ನಿರಂತರ ಚರಣದ ಧೂಳಿಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ್ತ 1 ಇದ್ದು ಜಗಕ್ಕಿಲ್ಲೆಂಬ ಶುದ್ಧ ಮೂರ್ಖತೆಯುಳ್ಳಅದ್ವೈತಿಗಳ ಬುದ್ಧಿಮಡುವನ್ನೆ ಕಲಕುತ್ತ 2 ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-ಯಿಗಳ ಕರದಲ್ಲಿ ಪಿಡಿದು ಮೊಗದ ಮೇಲೆ ಉಗುಳುತ್ತ3 ಮಧ್ವಮುನೇಂದ್ರರ ಶುದ್ಧತೀರ್ಥದಿ ಮಿಂದುತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ 4 ಮುರಿಯಲು ದುರುಳನ ಗರುವವನೆ ಮುನ್ನಸಿರಿ ಹಯವದನನ ಅರಮನೆ ಪಟ್ಟದ 5
--------------
ವಾದಿರಾಜ