ಬಾಲನಮ್ಮ ಬಾಲಕೃಷ್ಣ ಬಹಳ ಮಾಯಕಾರನೀತ ಪ
ಬಾಲನೀನೆ ಗೋಪಾಲ ನೀಲಶ್ಯಾಮ ವನಮಾಲ
ಬಾಲನಂತೆ ಕಣ್ಗೆತೋರಿ ಆಲಯ ಗೌಪ್ಯದಿಂದ ದೂರಿ
ಅಧರ ಸುರಿವ ಅ.ಪ
ಮಿಂದು ಮಡಿಯನುಟ್ಟಾನಂದದಿ ಶೋಭಿಸುವ
ಅಂದಮಾದ ಹಂಸತಲ್ಪದಿ ಪವಡಿಸಿರುವ
ಇಂದು ಮುಖಿಯವರ ಬಳಿಗೆ ಮುದದಿ ಮಂದಹಾಸದಿ
ಮೋಹ ಮಾತನಾಡಿ
ಬಾಧಿಸಿ ಕಂದರ್ಪನ್ಹೇವದಿ
ಸುಲಿದುಕೊಂಡವ 1
ನಲಿನಲಿದು ಬೀಳುತೇಳುತ ಲಲನೆಯರಿಗೀ
ಸುಲಿಯಪಲ್ಲು ತೋರಿನಗುತ ದಾರಿ ತರುಬಿ
ಚೆಲುವಾದಾಟಗಳನೆ ಆಡುತ ಕೊಳಲನೂದುತ
ಅರಿವು ಮರವೆಮಾಡಿ
ತಿಳಿಯದ್ಹಾಗೆ ಘಳಿಲಿನ್ಹಾರಿ ಎಳೆದು ಏಕಾಂತಸ್ಥಳಕ್ಕೊಯ್ದು
ಹಲವು ಕ್ರೀಡದಿಕಳೆಯ ಸೆಳೆದು ಗಲ್ಲಕಚ್ಚುವ ಜಿಗಿದು ಓಡುವ 2
ಹಿತದಿ ಆಡುವ ಸುತರ ಕೆಣಕುವ ಬಿಡಿಸಲ್ಹೋದ
ಸತಿಯರ ಮೈಮೇಲೆ ಬರುವ ಸಣ್ಣವನೇನೇ
ಪತಿ ನಾ ನಿಮಗೆಂದ್ಯವ್ವನ ತಾಳುವ ವ್ಯಥೆಯಬಡಿಸುವ
ಮೀಸಲು ಮುರಿಸಿ
ದೇವರು ತಾನೆಯೆನಿಸಿ
ಪತಿತ ಶ್ರೀರಾಮ 3