ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿಗೆ ಕಾಣದೆ ಏಕಿರುವೇ ರಂಗ ಕಣ್ಣಲಿ ನೋಡದೆ ಬಣ್ಣಿಸಲಳವೇ ಪ ಬಣ್ಣವು ಬಿಳುಪೋ | ಬೆಣ್ಣೆಯ ಕದಪೋ ಚಿಣ್ಣನೊ ತರುಣನೋ | ಹಣ್ಣುಮುದುಕನೋ ಅ.ಪ ನರನಾಗಿರುವೆಯೋ | ಹರಿಯಾಗಿರುವೆಯೋ ನರಹರಿಯೆಂಬರು | ದಿಟವೋ ಸಟೆಯೋ ಗಿರಿಯಂತಿರುವೆಯೋ | ಧರೆಯಂತಿರುವೆಯೋ ಗಿರಿಧರನೆಂಬರು ದಿಟವೋ ಸಟೆಯೋ 1 ಸ್ಮರನಂತಿಹೆಯೋ | ಗುರುವಂತಿಹೆಯೋ ಸ್ಮರಗುರುವೆಂಬರು ದಿಟವೋ ಸಟೆಯೋ ಕರಣನಾಗಿರುವೆಯೋ ಕಾರಣನಹೆಯೋ ಕರಣಕಾರಣ ನೀನೆಂಬುದು ದಿಟವೋ ಸಟೆಯೋ 2 ವೇದವಾಗಿರುವೆಯೋ ನಾದವಾಗಿರುವೆಯೋ ವೇದನಾದಗಳೊಂದೇ ಎಂಬುದು ಸಟೆಯೋ ಕಾದಿಹೆನಯ್ಯ ಮೋದವನೀಯೋ ಸಾದರದಿಂದ ಬಂದೆನ್ನನು ಕಾಯೋ 3 ಸಲಿಗೆಯ ತೋರು ಮಾಂಗಿರಿರಂಗ ಸಲೆ ನಲಿವೆನೋರಂಗ ಗರುಡತುರಂಗ ಛಲವ ಬಿಡೋ ರಂಗ ನಿಲು ನಗುತಲಿ ರಂಗ ಸಲೆ ಬಣ್ಣಿಪೆನಾ ಚೆಲುವನು ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವಾನಾ ಮೂರು ಲೋಕಂಗಳನುನೆರೆ ಕಾವಾನಾ ಶರಣಾಗತ ಸಂ ಜೀವಾನ ರೂಪ ಕಂಡೆ ಕೈಯಡಿಯಾ ಪ ಧಗಧಗಿಸುವ ಕೋಟಿ ದಿವಾಕರ ಕಿರಣಗಳ ಧೃಗುಳುಗಳ ಕಾಂತಿಯ ಮೊಗೆದು ಚೆಲ್ಲುತ ಪಾ ಲೊಗುವ ಕದಪಿಲಿ ಢಾಳಿಪ ಕುಂಡಲಂಗಳಾ 1 ತಿಲಕದ ಕುಡಿವರಿದಿಹ ಪುರ್ಬುಗಳ ಮಂ ಹೇಮ ಚಂಪಕದ ನಾಸಿಕದಾ ಜಲಜ ಕಸ್ತೂರಿ ಕಪ್ಪುರದ ಕಂಪಿನ ಸುಲಿಪಲ್ಲಿನ ಬಾಯಿದೆರೆಯ ಚೆಲುವನುಳ್ಳಾ 2 ತೋರಮಂದಾರ ತುಲಸೀ ವನಮಾಲೆ ಕೊರಳ ಹಾರ ಪೇರುರದಾ ಶ್ರೀ ಚಂದನದಾ ವಾರಿಜಪಾಣಿಯುಗದೆ ಶಂಖಚಕ್ರ ಸ- ರೋರುಹ ಕರದಲಭಯವಿತ್ತು ಸಲಹುವಾ 3 ಅಂದು ಜಘನದಿ ಕರವಿಟ್ಟು ಪೊಂಬಟ್ಟೆಯನುಟ್ಟು ಮಣಿ ಬಿರುಡೆಯವಿಟ್ಟು ಸ ನ್ಮುದದಿ ವೀರಮುದ್ರಿಕೆ ಮಂಡಿಕಾಗಳನಿವಿಟ್ಟು ಮೃದುಪಾದನಖದಿ ಮೂಜಗವ ಬೆಳಗುತಿಹ4 ಪಾವಕ ವರಕಾಂತಿಯ ಗೆಲುವಾ ಜಾಜಿ ಸೇವಂತಿಗೆ ಮೃದುವನು ಸೋಲಿಪಡಿಗಳಾ ಶ್ರೀ ವೆಲಾ ಪುರದ ವೈಕುಂಠೇಶ ವೇಂಕಟಾದ್ರೀಶಾ 5
--------------
ಬೇಲೂರು ವೈಕುಂಠದಾಸರು
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಯಾರಿಗೆ ಹೋಲುವೆ ನಿನ್ನ ಯಾರಲ್ಲಿ ಸಲ್ಲಾಪಿಸಲಿ ಮಾರನೋ ಮದನನ ಪಡೆದ ಕೇಶವನೋ ಪ ಸಾರಸವದನನು ವಾರಿಧಿಶಯನನು ಅ.ಪ ಆಹವ ಭೀಮನೋ | ಸಾಹಸ ಮಲ್ಲನೋ ಬಹು ಸುದೀರ್ಘನು ಮೋಹಮಂದಿರನು ಮಹಿಜೆಯರಸನೋ ಅಹಿಯ ಶಯನನೋ ಬಹುಗುಣಾನ್ವಿತ ವೆಂಕಟೇಶನೋ ಮಹಿತ ಮಹಿಮನು ಸಾಹಸ ಶೀಲನು ಪಾಹಿರಘು ಕುಲಪತಿ ಚೆನ್ನ ಚೆಲುವನು 1 ಉರಗ ಭೂಷಣನೋ | ಸರಸಿಜ ಭವನೋ ಧರಣಿಯ ಅಳೆದ ಪರಮಪುರುಷನೋ ಗರುಡಗಮನನೋ | ಕರುಣ ಭಜಿಪನೋ ನರಪಸುತ ಕೋದಂಡಧರನೋ ಮೆರೆವ ಕಾಂಚೀಪುರದ ವರದನೋ ನಿರುತ ವಂದಿತ ಮಾಂಗಿರೀಶನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗಯ್ಯ ಮನೆಗೆ ಬಂದರೆ ಅಂತ-ರಂಗದಿ ಗುಡಿಕಟ್ಟಿ ಕುಣಿವೆ ನಾ ಪ ಎಳೆ ತುಳಸಿವನ ಮಾಲೆಯು ರಂಗ-ಗೆಳೆ ನೀಲದ ಮೈಯ ಢಾಳವುಪೊಳೆವ ಪೊಂಗೊಳಲೊಪ್ಪೆ, ಚೆಲುವನು ನಮ್ಮನಿಲಯಕ್ಕೆ ಬಂದ ಭಾಗ್ಯವು ನೋಡ 1 ಬಾಡಿದ ಮಾವು ಪಲ್ಲವಿಸಿತು, ಹರಿನೋಡಲು ಜಗವು ಭುಲ್ಲವಿಸಿತುಕೂಡಿದ ಮನದ ತಾಪಗಳೆಲ್ಲ, ಎತ್ತ-ಲೋಡಿತೊ ಹರಿ ಬಂದ ಭರದಿಂದ ನೋಡ 2 ಬಿಸಿಲು ಬೆಳೆದಿಂಗಳಾಯಿತು, ತಾ-ಮಸಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದರೆ ಅಲ್ಲಿವಿಷ ಹೋಗಿ ಅಮೃತವಾಯಿತು ನೋಡ 3 ಹಾವು ನ್ಯಾವಳವಾಯಿತು, ಅಲ್ಲಿದಾವಾನಳ ತಂಪಾಯಿತುಬೇವು ಸಕ್ಕರೆ ಆಯಿತು ನಮ್ಮದೇವಕಿಸುತ ಬಂದರೆ ನೋಡ 4ಜಾಣೇರರಸನೋಡು ರಂಗನು, ಅವತಾನಾಗಿ ಬೆನ್ನ ಬಿಡ ನಮ್ಮನುಏನಾದರೂ ಅಗಲದಲೆ ನಮ್ಮಮಾನಾಭಿಮಾನದೊಡೆಯ ಶ್ರೀ ಕೃಷ್ಣ 5
--------------
ವ್ಯಾಸರಾಯರು