ಬಲುಸೂಕ್ಷ್ಮ ಗುರು ಗೂಢವಿದ್ಯ
ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ
ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ
ಉನ್ಮನವಾಗಿ ಬೆರೆದಾಡುವ ನಿಜಸ್ಥಾನ
ಚೆನ್ನಾಗ್ಯಾದಾನಂದ ಘನ
ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ 1
ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ
ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ
ಅಗ್ರ ಗುರುಪಾದವನು ಕೂಡಿ
ಶುಕ ಮುನಿಗಳಿಗಿದೆ ನೋಡಿ 2
ಶಿರದಲಿ ಕರವಿಟ್ಟು ನೋಡಿ ನಿಜವರ್ಮ
ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ
ತರಳಮಹಿಪತಿಗಿದೆ ಸುಬ್ರಹ್ಮ
ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ 3