ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ ಭಾಮೇರಿಬ್ಬರಿಗೆ ರಂಗಯ್ಯ ಪ ಬಂದು ರುಕ್ಮಿಣಿ ಭಾಮೇರಿಂದತಿ ಸಂಭ್ರಮ್ಮದಿಂದ ರಂಗಯ್ಯ ಕುಂದಣದ ಹಸೆಮ್ಯಾಲೆ ಕುಳಿತಿರೆ ಚೆಂದದಲಿ ನಗುತ ಚಂದ್ರವದನ ತಾ ಚತುರ್ಭುಜದಿಂದಲಿ ಅಂಗನೆಯರ ಆಲಿಂಗನೆ ಮಾಡುತ 1 ಹೂವ ಮುಡಿಸುತ ವಾರಿಜಾಕ್ಷೇರ ವಾರೆನೋಟದಿ ನೋಡಿ ನಗುತ ರಂಗಯ್ಯ ಸಾರಸಮುಖಿ ಸಹಿತ ಸರಸ- ವಾಡುತ ನಾರದರು ನಮ್ಮಿಬ್ಬರ ಕದನಕೆ ಹೂಡಿದರೆ ಹುಚ್ಚಾದಿರೆಂದೆನುತ 2 ಮಲ್ಲೆ ಮಲ್ಲಿಗೆಮೊಗ್ಗು ಶಾವಂತಿಗೆ ಕಮಲ ರಂಗಯ್ಯ ಅರಳು ಮೊಗ್ಗುಗಳು ಝಲ್ಲೆ ಕುಸುಮಗಳು ಎಲ್ಲ ತನಕೈಯಲ್ಲಿ ಪಿಡಿದು ಚೆಲ್ವ ಭೀ- ಮೇಶ ಕೃಷ್ಣ ರುಕ್ಮಿಣಿಗೆ 3
--------------
ಹರಪನಹಳ್ಳಿಭೀಮವ್ವ
ಏನು ಬೇಡಲಿ ನಿನ್ನ ಬಳಿಗೆ ಬಂದುಜನನಿಯ ಕೊಡು ಎಂದು ಜಯವಂತ ಬೇಡುವೆನೆಅನುಜನ ಕೊಡು ಎಂದು ಅತಿಶಯದಿ ಬೇಡುವೆನೆಸತಿಯಳ ಕೊಡು ಎಂದು ಮತಿವಂತ ಬೇಡುವೆನೆಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೆಬೇಡುವೆನು ನಾ ನಿನ್ನ ಬೇಡತಕ್ಕುದ ದೇವ
--------------
ಗೋಪಾಲದಾಸರು
ಜಾÕನವಂತರಿಗೆವಿಧಿ ಕಾಡುವುದು ಸತ್ಯ - ಅಜ್ಞಾನಿ ಮೂಢರಿಗೆಹರಿ ನಿನ್ನ ಬಲವಯ್ಯಪಹಿಂದೆ ಹರಿಶ್ಚಂದ್ರನ ಅರಣ್ಯವನೆ ಸೇರಿಸಿತುಮುಂದಾಗಿ ಕುಳಿತಿತ್ತು ಕರಿರಾಜಗೆ ||ಚೆಂದದಲಿ ಪಾಂಡವರ ಅರಣ್ಯ ಸೇರಿಸಿತುಸುಂದರಿಯ ಸೀತೆಯನು ಲಂಕೆಯೊಳಗಿಟ್ಟಿತು 1ಚಂದ್ರಂಗೆವಿಧಿ ಕಾಡಿ ಸರ್ಪ ತಾ ನುಂಗಿತುಇಂದ್ರಂಗೆವಿಧಿ ಕಾಡಿ ಅಂಗ ಭಂಗವಾಯಿತು ||ಚಂದ್ರಶೇಖರನನ್ನು ಸುಡಗಾಡ ಸೇರಿಸಿತುಇಂದಿದನು ತಿಳಿದರೆ ನರರ ಪಾಡೇನು 2ವಿಧಿ ಕಾಡುವಾ ಕಾಲಕಿಲ್ಲದ್ದೆಲ್ಲವು ಬಂತುವಿಧಿ ಕಳವು ಸುಳ್ಳು ಹಾದರ ಕಲಿಸಿತು ||ವಿಧಿ ಬೇನೆ ಚಳಿಯುರಿಯ ರೋಗಂಗಳನೆತಂತುವಿಧಿಯ ಗೆದ್ದವ ನಮ್ಮಪುರಂದರ ವಿಠಲ3
--------------
ಪುರಂದರದಾಸರು