ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನ್ನ ದೂರುವರೆ ಪೇಳಮ್ಮಯ್ಯ ಪೋಕಬುದ್ಧಿಯ ಗೊಲ್ಲತಿ ಪೋಕ ಲೋಕಲೋಕದಿ ನೋಡೆ ನಾಕಾಣೆನೆಲ್ಲೆಲ್ಲೂ ಪ ಅಮ್ಮಯ್ಯ ನೀನಿಡುವೊ ಪಾಲ್ಬೆಣ್ಣೆಯ ಕಣ್ಣಿಂದ ನೋಡುವೆನೆ ಅಣ್ಣ ರಾಮರ ಕೇಳೆ ಎನ್ನಾಣೆ ಹುಸಿಯಲ್ಲ ಎನ್ನ ಪಣೆಯ ಲಿಖಿತ ಮುನ್ನ ಮಾಡಲಿ ಏನೆ 1 ದುಷ್ಟಹೆಂಗಳೇರಾಡುವೊ ಮಾತೊಂದು ನೀ ಗೊತ್ತು ಹಿಡಿಯ ಬ್ಯಾಡಮ್ಮ ಚಟ್ಟಿಗೆ ಬೆಣ್ಣೆಯ ಮೆಲುವೋದುಂಟಾದರೆ ಪುಟ್ಟಕೂಸಿನ ಹೊಟ್ಟೆಗೆ ದೃಷ್ಟಿತಾಗದು ಏನೆ 2 ಚೆಂಡನಾಡುವಾಗ ಇವರು ಎನ್ನ ಮುಂಗೈಯ ಪಿಡಿದುಕೊಂಡು ಗಂಡರಂಜಿಕೆಯಿಲ್ಲ ಗಾಡಿಕಾರ್ತಿಯರೆಲ್ಲ ಬಂಡು ಮಾತುಗಳಾಡಿ ಬಂದು ದೂರಿದರೇನೆ 3 ಸಣ್ಣ ಮಕ್ಕಳೊಡನೆ ಅಂಗಳದಿ ನಾ- ಚಿಣ್ಣಿಯನಾಡುವಾಗ ಬೆಣ್ಣೆಕೊಡುತೇವೆಂದು ಬಣ್ಣ ಬಣ್ಣದಿ ಎನ್ನ ಕಣ್ಣು ಸನ್ನೆಯ ಮಾಡಿ ಕರೆದರ್ಯಾತಕೆ ಕೇಳೆ 4 ಗೋಲಿ ಗುಂಡುಗಳಾಡುತ ನಿಂತಿರಲೆನ್ನ ಲೀಲೆಯಿಂದಲಿ ನೋಡುತ ಭೀಮೇಶಕೃಷ್ಣ ಬಾರೆಂದೆನ್ನ ಬಿಗಿದಪ್ಪಿ ಬಾಯ ತಂಬುಲಗಳ ಬೇಡಿ ಮಾತಾಡೋರು 5
--------------
ಹರಪನಹಳ್ಳಿಭೀಮವ್ವ
ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪಬೆಟ್ಟು ಬಾಯೊಳಗಿಟ್ಟರೆ ರಂಗ - ಕಚ್ಚಲರಿಯನೆ |ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ ||ರಟ್ಟೆಯ ಹಿಡಿದು ನಡಸಲು ರಂಗ -ದಟ್ಟಡಿಇಕ್ಕುವನೆ |ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |ಪಟ್ಟ ಪಟ್ಟಿಗೆ ರಟ್ಟು ಮಾಡುವುದು 1ಅರಿಯದಂತೆ ನೊರೆಹಾಲನು ಕುಡಿವನೆ -ಕರೆಕರೆಮಾಡುವನೆ |ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು--------------------ಸುರಿಯವನೆ ||ಸರಸಿಜಾಕ್ಷಿಯರೆ ಪರಿಪರಿಯಿಂದಲಿ |ಹರಲಿ ಮಾಡುವುದಿದು ತರವೇನಮ್ಮ 2ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |----------------------------------------ಸಿಕ್ಕಿತೆನುತ ಬಹು ಚಕ್ಕಂದಾಡುತ |ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ 3ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||ಬಾಲಕೃಷ್ಣನಿಗೆ ಜೋಲುವ ಕುಚಗಳು |ನಿಲುಕುವ ಬಗೆ ಹೇಗೆ? ||ಖೂಳಸೆಟವಿಯರು ಕಾಳವಾಗಿಹರು |ಕೇಳಿಕೇಳಿ ಬೇಸತ್ತಿಹೆನಮ್ಮ 4ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||--------------------ಸಲ್ಲದು ಈ ನುಡಿ ಪುರಂದರವಿಠಲಗೆ |ಹಲ್ಲೊಳಗಾತನ ಇಟ್ಟಿರಬೇಡಿ 5
--------------
ಪುರಂದರದಾಸರು