ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಠಲ ಓಡಿ ಬಾರೊ ತೊಟ್ಟಿಲನೇರೊ ಪುಟ್ಟ ಕಮಲದಂಥ ಬಟ್ಟ ಮುಖವ ತೋರೊ ಪ. ಜಟ್ಟಿಯಂದದಿ ಭುಜ ತಟ್ಟಿ ಹುಂಕರಿಸುತ ಅ- ರಿಷ್ಟ ವೃಷಭನನ್ನು ಮೆಟ್ಟಿ ಮಡುಹಿದಂಥ 1 ಹೇಷಿಕ ಭೀಷಣ ಕೇಶಿಯಂಬಸುರನ ಘಾಸಿಮಾಡಿದ ತೋಳ ಬೀಸುತ ಭರದಿಂದ 2 ಮಂದಹಾಸದಿ ಶರದಿಂದು ಕಾಂತಿಯ ಗೆಲ್ವ ಸುಂದರ ಮುಖ ಪೂರ್ಣಾನಂದ ಗೋಪಿಯ ತಂದ 3 ಮೀಸಲ ನೊರೆಹಾಲ ಕಾಸಿ ಸಕ್ಕರೆ ಕೂಡಿ ವಾಸ ಚೂರ್ಣವನಿಕ್ಕಿ ಶ್ರೀಶನಿನ್ನೊಶಕೀವೆ 4 ನಿತ್ಯ ಸುಖಾಂಬುಧೆ ನಿರವಧಿ ಫಲದ ಸ- ರ್ವೋತ್ತಮ ಶೇಷಾದ್ರಿ ಶಿಖರೀಶ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ