ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ದೇವಿ ಇಂತು ಚಿಂತೆಯು ಯಾಕ| ಸುಲಭದಿ ತಂದು ತೋರುವೆ ನಿನ್ನರಸನಾ ಪ ನಳಿನಗಳಲಿ ಅಪರಾಧವಾಯಿತೆಂದು| ಮುಳಿದು ಬಿಂಕದಿ ಅಳಿಮೊರೆದು ತಾನೆದ್ದು| ಕಲಸಾರುವೇನೇ ನಿನ್ನಯ ತನುಗುಪವ| ತೊಲಗಿಬಿಟ್ಟು ನಿಲ್ಲುವನೇನೇ ರಂಗಾ1 ಹಣ್ಣಾಗಿ ರಂಜಿಸತಿಹಾ ಚೂತದ ಫಲವನ್ನು| ತ್ಯಜಿಸಿ ಬಂದ ತಪ್ಪಾಯಿತೆಂದು| ಉಣಲೋಲ್ಲದೇ ಶುಕಬಿಟ್ಟು ಪೋಪದೇನೇ| ಪೊಂಬಣ್ಣಾಧರಸವಿಯಾ ಬಿಟ್ಟು ನಿಲ್ಲುವನೇ2 ಘನ್ನ ಚಿಂತೆಯಬಿಟ್ಟು ಹರುಷದಲಿರು ತಾಯೆ| ಇನ್ನು ನಾ ಪೋಗಿ ನಾನಾ ಪರಿಯಿಂದಾ| ನಿನ್ನ ಬಳಿಗೆ ಒಪ್ಪಂತೆ ಮಾಡುವೆನೆ ಸಂ| ಪನ್ನ ಕೀರುತಿ ಮಹಿಪತಿ ಸುತ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀ ಕೃಷ್ಣ ನಾನರಿಯದಿರ್ದಡಿದ ನೀನರಿಯದವನೇ ಪ ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲು ಕೊಂದು ಚೂತದ ನೆಳಲಸಾರಿ ನಾನು ಒಂದು ನಿಮಿಷಮ ನೀರ ತಡಿಯಲಿ ಸಂಚರಿಸುತಿರ ಲೊಂದು ತಕ್ಷಕ ಬಂದು ವನವ ಹೊಕ್ಕಿರಲು 1 ಮಲ ಮೂತ್ರದುಪಹತಿಯ ಪರಿಹರಿಸಿ ಕೈಗಳನು ಜಲಮೃತ್ತಿಕೆಗಳಿಂದ ತೊಳೆದು ತೊಳೆದು ಎಳೆ ಬಿಸಿಲ ಸೇವಿಸುತ ದಂತಧಾವನ ಗೈದು ಸಲಿಲವನೆ ಮುಕ್ಕುಳಿಸಿ ಕೇಲದೊಳುಗಿದು 2 ನಿಂತು ಕಾಲ್ಮೊಗ ದೊಳೆದು ಆಚಮಿಸಿ ಆದಿತ್ಯ ನಂತಿ ಕಕೆ ಸಲಿಲಮಂತಿದ್ದಿ ಜಪವಾ ಅಂತ ರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು ಗೊಂತಿಗೈತಂದವನು ಮರಳಿಧರಿಸಿ 3 ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ ಲಾಶ್ಚರ್ಯವೆನಿಸಿ ಬದಿಯೊಳಗುಮ್ಮಲು ಸ್ವಚ್ಚವಲ್ಲವಿದೆಂದು ಕಿಮುಚಿನಾ ನೋಡಿ ಬಲು ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯಲು ಕಂಡೆ 4 ನೀ ಕೊಲುವ ಕಾಲದೊಳು ಕೊಲುವರಿಲ್ಲ ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ ನೀ ಕರುಣದಿಂ ಕಾಯ್ದೆ ಎನ್ನಸುವನು 5
--------------
ಕವಿ ಪರಮದೇವದಾಸರು