ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡುವನೀಶ್ವರ ಜೀವಪಗಡೆಯ ಕಾಯಆಡುವನವರವರ ಕರ್ಮಾನುಸಾರಆಡಿಯೆ ತನಗೆ ಬೇಸರವಾಗೆ ಕಟ್ಟುವಆಡುವ ವಿವರವ ಹೇಳುವೆ ಕೇಳಿ ಪ ಪ್ರಪಂಚ ಹಾಸಂಗಿ ಪ್ರಾರಬ್ಧ ಲತ್ತವುಪಾಪ ಅಜ್ಞಾನ ಲಿಂಗತನುವೆಂಬ ಚಿಟ್ಟೆಯುರೂಪು ನಾನಾ ಬಗೆಯ ಜೀವಕಾಯನೆ ಮಾಡಿಭಾಪು ಭಳಿರೇ ಎಂದು ಕೊಂದು ಹೂಡಾಡುತ 1 ಒಂದಕೊಂದರಬಲ ಒಂದಕೆ ಜೋಡು ಬಲಒಂದು ಜೋಡಿಗೆ ಒಂದು ಜೋಡು ಬಲ ಮಾಡಿಒಂದರಿಂದೊಂದು ಕೊಂದು ಜೋಡಿಂದ ಜೋಡು ಕೊಂದುಅಂದು ಹುಟ್ಟಿ ಸಾಯುವುದಕ್ಕೆ ಕಡೆಯಿಲ್ಲದೇ 2 ಈ ಪರಿಯಲಾಡುತ್ತ ತನಗೆ ಬೇಸರ ಹುಟ್ಟೆಪಾಪಿಗಳನೆಲ್ಲ ಪಾಪ ಚೀಲದಿ ಕಟ್ಟಿಭೂಪ ಚಿದಾನಂದನು ಆದ ಈಶ್ವರ ತಾನುರೂಪು ವಿರೂಪಾದ ನಿದ್ದೆಯಲಿ ಮಲಗುವ 3
--------------
ಚಿದಾನಂದ ಅವಧೂತರು
ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ ಶ್ರೀಕರನ ಸರ್ವತ್ರ ಸ್ಮರಿಸುತ ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ ಸಾಕುವನು ಸಕಲೇಷ್ಟದಾಯಕ ಪ. ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು ದಾನ ಧರ್ಮ ಪರೋಪಕಾರ ನಿಜಾನುಪಾಲನವು ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ- ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ 1 ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ ಮಾಡುವ ರಾಜನಿರುತಿರೆ 2 ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ ತಾಪ ಹೊಂದದೆ ಭೂಪರಂತಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ