ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಲೋಕನೀತಿ ಮಾಧವ ಎನಬಾರದೆ ಜೀವ ಕಾಲ ಪ ಆಚಿಂತೆ ಈ ಚಿಂತೆ ಎಲ್ಲಾ ಚಿಂತೆಯನು ಕಿಂಚಿತ್ತು ಹೊತ್ತು ಬಂತೆಯಾದೆ ನಾನು ಅ.ಪ ಪತಿಯ ಚಿಂತೆ ಪರಸತಿಯ ಚಿಂತೆ ಅತಿಯಾದ ಮೋಹದ ಮಕ್ಕಳ ಚಿಂತೆ ಪ್ರತಿದಿನ ತುತ್ತಿನ ಚೀಲದ ಚಿಂತೆ ಮತ್ತೇನು ಅದಕಾಗಿ ಆಸ್ತಿಯ ಚಿಂತೆ 1 ಆಸ್ತಿಮಾಡಿದರೆ ಕಾಯುವ ಚಿಂತೆ ಜಾಸ್ತಿ ಸೇರಿದರೆ ಕನಲುವ ಚಿಂತೆ ಸುಸ್ತಿ ಬಡ್ಡಿಯಲಿ ಬೇಯುವ ಚಿಂತೆ ಸುಸ್ತಾಗಿ ಸೊರಗುವ ನೋವಿನ ಚಿಂತೆ 2 ಬದುಕಿದರೂ ಚಿಂತೆ ಬಾಳಿದರೂ ಚಿಂತೆ ಬದುಕ ಸಹಿಸದ ಮೂಢರಿಂದ ಚಿಂತೆ ಮುದದಿ ಕಾಯುವ ಮಾಧವನ ಚಿಂತೆ ಬಾಧಿಸದಲ್ಲೋ ಕೊಂಚವು ತಂದೆ 3 ಆ ಚಿಂತೆ ಈ ಚಿಂತೆ ಯಾಚಿಂತೆಯೊಳಗಿಂದ ಆಚೆಗೆ ಎಳೆತಂದು ಮತಿಯನು ನೀಡೋ ಅಚಿಂತ್ಯ ನಿನ್ನನೆ ಚಿಂತಿಸುವಂತೆನ್ನ ನಿಶ್ಚಿಂತನಾಗಿಸೊ ಜಾಜಿಪುರೀಶ 4
--------------
ನಾರಾಯಣಶರ್ಮರು
ಆಡುವನೀಶ್ವರ ಜೀವಪಗಡೆಯ ಕಾಯಆಡುವನವರವರ ಕರ್ಮಾನುಸಾರಆಡಿಯೆ ತನಗೆ ಬೇಸರವಾಗೆ ಕಟ್ಟುವಆಡುವ ವಿವರವ ಹೇಳುವೆ ಕೇಳಿ ಪ ಪ್ರಪಂಚ ಹಾಸಂಗಿ ಪ್ರಾರಬ್ಧ ಲತ್ತವುಪಾಪ ಅಜ್ಞಾನ ಲಿಂಗತನುವೆಂಬ ಚಿಟ್ಟೆಯುರೂಪು ನಾನಾ ಬಗೆಯ ಜೀವಕಾಯನೆ ಮಾಡಿಭಾಪು ಭಳಿರೇ ಎಂದು ಕೊಂದು ಹೂಡಾಡುತ 1 ಒಂದಕೊಂದರಬಲ ಒಂದಕೆ ಜೋಡು ಬಲಒಂದು ಜೋಡಿಗೆ ಒಂದು ಜೋಡು ಬಲ ಮಾಡಿಒಂದರಿಂದೊಂದು ಕೊಂದು ಜೋಡಿಂದ ಜೋಡು ಕೊಂದುಅಂದು ಹುಟ್ಟಿ ಸಾಯುವುದಕ್ಕೆ ಕಡೆಯಿಲ್ಲದೇ 2 ಈ ಪರಿಯಲಾಡುತ್ತ ತನಗೆ ಬೇಸರ ಹುಟ್ಟೆಪಾಪಿಗಳನೆಲ್ಲ ಪಾಪ ಚೀಲದಿ ಕಟ್ಟಿಭೂಪ ಚಿದಾನಂದನು ಆದ ಈಶ್ವರ ತಾನುರೂಪು ವಿರೂಪಾದ ನಿದ್ದೆಯಲಿ ಮಲಗುವ 3
--------------
ಚಿದಾನಂದ ಅವಧೂತರು
ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಏಳುತಲಿ ಎದ್ದು ಎಚ್ಚರಿಸುತ ನೀ ನೆನೆಯೊ | ಪಾಲಿಸುವ ಮೂಲೋಕ ಪರಮಾತ್ಮನಾ ಪ ಮೂರೊಂದು ಪದರದ ಚೀಲದೊಳು ಥಳಥಳಸಿ ದೋರುತಿಹ ರತ್ನ ಪರಿಚಿದ್ರೂಪನಾ | ಅರಿಗಳ ವಡೆದ ಘನ ತ್ರಿವೇಣಿ ತೀರದಲಿಹ | ಧೀರಯೋಗಿಯ ಕಂಗಳಾನಂದನ 1 ಬೇರು ಮೇಲಾಗಿ ಕೊಂಬುಗಳು ಕೆಳಗಾದ ಸಂ | ಸಾರ ವೃಕ್ಷವ ತ್ರಿಗುಣಮಯದಿಂದಲಿ || ವಾರಿಜಭವಾಂಡ ಪಿಂಡಾಂಡಗಳ ಪರಿಪರಿಯ | ತೋರಿ ತೋರದಲಿಪ್ಪ ನಿರ್ಲಿಪ್ತನಾ2 ನೋಡಿಸುವ ಕೇಳಿಸುವ ವಾಸಿಸುವ ಪರಿಮಳವ | ಆಡಿಸುವ ಕರಚರಣ ನುಡಿನುಡಿಸುವ | ರೂಢಿಯೊಳು ಸೂತ್ರಧಾರಕನಾಗಿ ಅಷ್ಟದಳದ | ಲಾಡುತಿಹ ಮಹೀಪತಿ ಸುತಪ್ರಭು ಭಕುತಿಯಲಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲಕೊಕೊಕೋ ಎನ್ನಿರೊ - ನಮ್ಮ ಪ ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದುಕೊಕೊಕೋ ಎನ್ನಿರೊ ಅ ಹೊದ್ದಿ ಮೊಲೆಯನುಂಡವಳಸುವನೆ ಕೊಂದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲಲೊದ್ದೊರಸಿದ ಕಳ್ಳ ಕೊಕೊಕೋ ಎನ್ನಿರೊಹದ್ದು ಹಗೆಯ ಹಾಸಿಗೆಯ ಮೇಲೊರಗಿದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಅರ್ಧದೇಹನ ಕೈಯ ತಲೆಯ ಕಪಟದಿಂದಕದ್ದು ಬಿಸುಟ ಕಳ್ಳ ಕೊಕೊಕೋ ಎನ್ನಿರೊ 1 ಮಣಿ ಮಲ್ಲಿಗೆ ದಂಡೆಯರಂಜೆ ಕದ್ದ ಕಳ್ಳ ಕೊಕೊಕೋ ಎನ್ನಿರೊಗುಂಜಿಯ ದಂಡೆಯ ಕಲ್ಲಿಯ ಚೀಲದಮಂಜು ಮೈಯ್ಯ ಕಳ್ಳ ಕೊಕೊಕೋ ಎನ್ನಿರೊಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲನೆಂಜಲಿಸಿದ ಕಳ್ಳ ಕೊಕೊಕೋ ಎನ್ನಿರೊಸಂಜೆ ಬೈಗಿನಲ್ಲಿ ಕರೆಯುವ ಸತಿಯರಅಂಜಿಸಿದ ಕಳ್ಳ ಕೊಕೊಕೋ ಎನ್ನಿರೊ 2 ಕೇಸರಿ ಎಂಬ ರಕ್ಕಸರನೆಲ್ಲರ ಕೊಂದವೇಷಧಾರಿ ಕಳ್ಳ ಕೊಕೊಕೋ ಎನ್ನಿರೊಮೋಸದಿ ಬಲಿಯ ದಾನವ ಬೇಡಿ ಅನುದಿನಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊಮೀಸಲ ಅನ್ನವ ಕೂಸಾಗಿ ಸವಿದುಂಡವೇಷಧಾರಿ ಕಳ್ಳ ಕೊಕೊಕೋ ಎನ್ನಿರೊಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನದೇಶದ ದಾರಿಗಳ್ಳ ಕೊಕೊಕೋ ಎನ್ನಿರೊ 3 ಆಕಳೊಳಾಡಿ ಪರಲೋಕಕೆ ನಡೆದಂಥಆಕೆವಾಳ ಕಳ್ಳ ಕೊಕೊಕೋ ಎನ್ನಿರೊಭೂಕಾಂತೆಯ ಸೊಸೆಯರನೆತ್ತೆ ಬಲುಹಿಂದನೂಕಿ ತಂದ ಕಳ್ಳ ಕೊಕೊಕೋ ಎನ್ನಿರೊಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರ ಕೈಲಿಸಾಕಿಸಿಕೊಂಡ ಕಳ್ಳ ಕೊಕೊಕೋ ಎನ್ನಿರೊಸಾಕಾರನಾಗಿ ಈ ಲೋಕವನೆಲ್ಲವಆಕ್ರಮಿಸಿದ ಕಳ್ಳ ಕೊಕೊಕೋ ಎನ್ನಿರೊ4 ಕ್ಷೀರವಾರಿಧಿ ವೈಕುಂಠನಗರಿಯನುಸೇರಿಸಿದ ಕಳ್ಳ ಕೊಕೊಕೋ ಎನ್ನಿರೊದ್ವಾರಾವತಿಯನು ನೀರೊಳು ಬಚ್ಚಿಟ್ಟಊರುಗಳ್ಳ ಬಂದ ಕೊಕೊಕೋ ಎನ್ನಿರೊದ್ವಾರಕೆಯಾಳುವ ಉಭಯದಾಸರ ತನ್ನಊರಿಗೊಯ್ದ ಕಳ್ಳ ಕೊಕೊಕೋ ಎನ್ನಿರೊಕಾರಣಾತ್ಮಕ ಕಾಗಿನೆಲೆಯಾದಿಕೇಶವಕ್ಷೀರ ಬೆಣ್ಣೆಯ ಕಳ್ಳ ಕೊಕೊಕೋ ಎನ್ನಿರೊ 5
--------------
ಕನಕದಾಸ
ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ ಶ್ರೀಕರನ ಸರ್ವತ್ರ ಸ್ಮರಿಸುತ ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ ಸಾಕುವನು ಸಕಲೇಷ್ಟದಾಯಕ ಪ. ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು ದಾನ ಧರ್ಮ ಪರೋಪಕಾರ ನಿಜಾನುಪಾಲನವು ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ- ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ 1 ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ ಮಾಡುವ ರಾಜನಿರುತಿರೆ 2 ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ ತಾಪ ಹೊಂದದೆ ಭೂಪರಂತಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಯೆಎನ್ನ ಕಾಯವನ್ನುಪಾಯದಿಂದ ಮೋಹಿಸಿ |ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |ಹರಿದು ಪಾಪಕರ್ಮದಿಂದೆ ತೊಪಳಲಿಬಳಲಿ ನೊಂದೆ ನಾ ||ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |ಅಕ್ಷಯ- ಅನಂತ ನನ್ನನೇಕೆ ಹೊರಗೆ ಮಾಡಿದೆ ||ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |ರಕ್ಷಿಸಯ್ಯ ಲಕ್ಷೀಪತಿಪುರಂದರವಿಠಲನೆ5
--------------
ಪುರಂದರದಾಸರು
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು