ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಗೆ ಬಂದಳು ದೇವೋತ್ತುಂಗ ವರಹನಾ ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ ಹಿಂಗದೆ ಪೊರೆದು ಸುಖಂಗಳನೀವು ತಾ ಮಂಗಳಾಂಗೆ ಮಾತಂಗೆ ಸುಗಮನೆ ಪ ಕಾಳ ಪನ್ನಗವೇಣಿ ಕೋಕಿಲವಾಣಿ ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ ವಾಲೆ ಮೂಗುತಿ ಅಣಿ ಮುತ್ತು ಕಠಾಣಿ ತೋಳು ಮಂದಾರಮಣಿ ಅರಿಗುಣಶ್ರೇಣಿ ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ ವಾಲಲು ಕದಿಪಿನ ನೀಲಗೂದಲು ಭ್ರಮ ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ1 ಕುಡುತೆಗಂಗಳ ನೀರೆ ಕಂಬುಕಂಧರೆ ಕಡಗ ಕಂಕಣದ್ವಾರೆ ಕೈಯ ಶೃಂಗಾರೇ ಜಡಿವ ಪದಕಹಾರೆ ಕಂಚಕಸೀರೆ ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ ಬಡನಡುವಿನ ಕಡು ಉಡುವಿನ ಕಿಂಕಣಿ ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ ಡಿಗಡಿಗೊಪ್ಪಲು ಕಡಲನ ಮಡದಿ 2 ತೀಡಿದ ಪರಿಮಳ ಗಂಧದ ಭೋಗಿ ಕೂಡಲಿಪುರದಲಿ ಭದ್ರಿವಂದಾಗಿ ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ ಆಡುತ ಪಾಡುತ ಬಲು ಲೇಸಾಗಿ ಬೇಡಿದ ಜನರಿಗೆ ಈಡಿಲ್ಲದ ವರವ ನೀಡುತ ನಿರುತರ ಮಾಡುತ ದಯವನು ನೋಡುತ ತಡವಿಲ್ಲದಲೆ 3 ಶೃಂಗಾರ ಮಾರ್ತಾಂಡೆ ಹರಿಹರ ಮಾತಾ ಅಂಗಾಧಿ ಪರ್ವತ ಪಂಚ ಪ್ರಖ್ಯಾತ ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ ಸಂಗೀತ ಗಾಯನದಿಂದ ವಾಲಗಗೊಳುತ ಸಂಗಮೆಯಾಗಿ ತಂಗಿಯ ಬೆರತೀಗ ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ ಗಂಗೆ ಎನಿಸಿಳ್ಯಮನನಾದೇಳಗೆ 4 ಲೋಕದೊಳಗೆ ಪ್ರತಿರಹಿತ ಪೆಸರಾದ ಚೀಕನ ಬರವಿಯ ಅಶ್ವಥಮರದ ನೃಕಂಠೀರವನ ಪಾದದಿ ವ್ಯಾಧಿಷ್ಟರಾದ ಸೋಕಿ ಮೈಮರೆದಂಥ ನಮಿತರು ಕರದಾ ಪಾಕ ಪದಾರ್ಥಕೆ ಒಲಿದೊಲಿದಾಡುತ ಶ್ರೀಕರ ವಿಜಯವಿಠ್ಠಲಗೆರಗುತ ನಾಕಕನ್ನಿಕೆಯಂತೆ ಹೊಳೆದಳುಯಿಂದು5
--------------
ವಿಜಯದಾಸ
ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ ಪ ದ್ವಿಜಕೇತನ ಗುಣವ್ರಜವ ಕೊಂಡಾಡುವಾಸುಜನ ಮಂದಾರನೀತ - ಪ್ರಖ್ಯಾತ ಅ.ಪ. ವಿ ಎಂದು ನುಡಿಯಲು ವಿಷಯ ಲಂಪಟ ದೂರಜ ಎಂದು ನುಡಿಯಲು ಜನನ ಹಾನಿಯ ಎಂದು ಕೊಂಡಾಡೆ ಯಮಭಟರು ಓಡುವರುರಾಯ ಎಂದೆನಲು ಹರಿಕಾವಾ - ವರವೀವಾ 1 ಇವರ ಸ್ಮರಣೆಯೆ ಸ್ನಾನ ಇವರ ಸ್ಮರಣೆಯೆ ಧ್ಯಾನಇವರ ಸ್ಮರಣೆಯೆ ಅಮೃತಪಾನಇವರ ಸ್ಮರಣೆಯ ಮಾಡೆ ಯುವತಿಗಕ್ಷಯವಿತ್ತತ್ರಿವಿಕ್ರಮನು ಮುಂದೆ ನಲಿವಾ - ಒಲಿವಾ 2 ವಾರಣಾಸಿಯ ಯಾತ್ರೆ ಮೂರು ಬಾರಿ ಮಾಡಿಮಾರಪಿತನೊಲುಮೆಯನು ಪಡೆದುಮೂರವತಾರದಾ ಮಧ್ವಮುನಿರಾಯರಾಚಾರು ಚರಣವನು ಭಜಿಪಾ - ಮುನಿಪಾ 3 ಪುರಂದರದಾಸರಾ ಪರಮಾನುಗ್ರಹ ಪಾತ್ರಗುರು ವಿಜಯರಾಯನೀತಾಸಿರಿ ವಿಜಯ ವಿಠಲನ್ನ ಶ್ರೀನಿವಾಸಾರ್ಯರುಹರಿಯಾಜ್ಞೆಯಿಂದ ಕೊಟ್ಟರೂ - ದಿಟ್ಟರೂ 4 ದಾನಧರ್ಮದಿ ಮಹಾ ಔದಾರ್ಯಗುಣದ ಶೌರ್ಯಶ್ರೀನಿವಾಸನ ಪ್ರೇಮಕುಮಾರಾಮಾನವೀ ಸೀಮೆ ಚೀಕನಪರಿ ನಿವಾಸ ಮೋ-ಹನ ವಿಠಲನ್ನ ನಿಜದಾಸಾ - ಉಲ್ಲಾಸಾ 5
--------------
ಮೋಹನದಾಸರು